The news is by your side.

ಬೆಳಗಾವಿ ನಗರದ ಚನ್ನಮ್ಮ ಸರ್ಕಲ್, ಅಝಂ ನಗರ, ಶಾಹು ನಗರ, ಖಾಸಬಾಗ ರಸ್ತೆಗಳೆಲ್ಲ ನೀರೇನೀರು

 

ಬೆಳಗಾವಿ: ಬೆಳಗಾವಿ ನಗರದ ಚನ್ನಮ್ಮ ಸರ್ಕಲ್, ಅಝಂ ನಗರ, ಶಾಹು ನಗರ, ಖಾಸಬಾಗ ಯಡಿಯೂರಪ್ಪ ಮಾರ್ಗ, ಓಂ ನಗರ ಸೇರಿ ಹಲವು ಪ್ರದೇಶಗಳಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿದೆ.
ನಗರ ಸೇರಿ ಜಿಲ್ಲೆಯಾದ್ಯಂತ ಎರಡು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಬೆಳಗಾವಿ ನಗರದಲ್ಲಿ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ
ಮನೆಗಳಿಗೂ ನೀರು ನುಗ್ಗುತ್ತಿದೆ. ಇದರಿಂದ ಜನರ ವಾಸ, ಜನ ಸಂಚಾರ, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಎದುರಾಗಿದೆ.
ಬೆಳಗಾವಿ ನಗರದ ಚನ್ನಮ್ಮ ಸರ್ಕಲ್, ಅಝಂ ನಗರ, ಶಾಹು ನಗರ, ಖಾಸಬಾಗ ಯಡಿಯೂರಪ್ಪ ಮಾರ್ಗ, ಓಂ ನಗರ ಸೇರಿ ಹಲವು ಪ್ರದೇಶಗಳಲ್ಲಿ ರಸ್ತೆಗಳಿಗೆ ನೀರು ಹರಿಯುತ್ತಿದ್ದು, ಹಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಬಳ್ಳಾರಿ ನಾಲಾ ಪ್ರದೇಶದ ಸಮರ್ಥ ನಗರ, ಓಂ ನಗರ ಪ್ರದೇಶದಲ್ಲಿಯಂತೂ ಜನಜೀವನ ತೀರ ಅಸ್ತವ್ಯಸ್ತಗೊಂಡಿದೆ.
ಈ ಸಂದರ್ಭದಲ್ಲಿ ಓಂ ನಗರ ನಿವಾಸಿ ಹೀರಾಸ್ವಾಮಿ ನಾಯ್ಡು ಮಾತನಾಡಿ, ಸಮರ್ಥ ನಗರದಿಂದ ಹರಿದು ಬರುವ ನೀರು ಓಂ ನಗರಕ್ಕೆ ನುಗ್ಗುತ್ತದೆ. ಸಂಪೂರ್ಣ ರಸ್ತೆಗಳು ಜಲಾವೃತವಾಗಿವೆ. ಮನೆ ಸುತ್ತಮುತ್ತಲಿನ ಎಲ್ಲ ಪ್ಲಾಟ್‍ಗಳಲ್ಲೂ ನೀರು ನಿಂತಿದೆ. ಮನೆಗಳಿಗೂ ನೀರು ನುಗ್ಗಿದೆ. ಪ್ರತಿವರ್ಷದ ಈ ಆವಾಂತರ ತಡೆಯಲು ಮಹಾನಗರ ಪಾಲಿಕೆ ಆಡಳಿತ, ಜಿಲ್ಲಾಡಳಿತ ಏನೇನೂ ಕ್ರಮ ಕೈಗೊಂಡಿಲ್ಲ. ಇಲ್ಲಿಯ ನಿವಾಸಿಗಳು ಇಂತಹ ವ್ಯವಸ್ಥೆಯನ್ನು ಸಹಿಸಿಕೊಂಡು ಜೀವನ ನಡೆಸಿದ್ದಾರೆ. ಜನಪ್ರತಿನಿಧಿಗಳು ಲಕ್ಷ ಕೊಡಬೇಕು, ನಿವಾಸಿಗಳ ಬವಣೆ ದೂರಗೊಳಿಸಬೇಕು ಎಂದರು.
ಈ ಬಗ್ಗೆ ಹಲವು ಮಾಧ್ಯಮ ಗಳು ವರದಿ ಮಾಡಿದರೂ ಅಧಿಕಾರಶಾಹಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ.

- Advertisement -

Leave A Reply

Your email address will not be published.