ಬೆಳಗಾವಿ:: ತಿಗಡೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎನ್.ತೇಗೂರ ಹೊರವಲಯದಲ್ಲಿರುವ ಶಿವರಾಯಪ್ಪ ಚಂದ್ರಪ್ಪ ಪಾಗಾದ ಅವರಿಗೆ ಸೇರಿದ ಹೊಲದಲ್ಲಿ ಗುಡಿಸಲಿಗೆ ಶನಿವಾರ ರಾತ್ರಿ ಬೆಂಕಿ ಹೊತ್ತಿಕೊಂಡಿದೆ. ಈ ಅವಘಡದಲ್ಲಿ 2 ಹೋರಿ, 3 ಆಕಳು ,2 ಕರು, 1 ಕುರಿ ಮೃತಪಟ್ಟಿದ್ದು, 3 ಲಕ್ಷ ರೂಪಾಯಿಗೂ ಹೆಚ್ಚು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎನ್ನಲಾಗಿದೆ.
ಸಮಾಜ ಸೇವಕ ಹಬೀಬ ಶಿಲೇದಾರ ಘಟನಾ ಸ್ಥಳಕ್ಕೆ ಭೇಟಿ ನೀಡಿದರು ಎಂದು ವರದಿಯಾಗಿದೆ. ದನಕರುಗಳನ್ನು ಕಳೆದುಕೊಂಡ ರೈತನಿಗೆ ಸಾಂತ್ವನ ಹೇಳಿ ವೈಯಕ್ತಿಕವಾಗಿ 25 ಸಾವಿರ ರೂಪಾಯಿ ಚೆಕ್ ನೀಡಿದರು. ನೊಂದ ರೈತನಿಗೆ ಕೂಡಲೇ ಪರಿಹಾರ ನೀಡಬೇಕು ಎಂದು ಬೈಲಹೊಂಗಲ ಉಪವಿಭಾಗಾಧಿಕಾರಿ ಹಾಗೂ ಕಿತ್ತೂರು ತಹಸೀಲಾರ್, ಕಿತ್ತೂರ ಸಿ ಪಿಐಗೆ ಮನವಿ ಮಾಡಿದರು ಎಂದು ವರದಿಯಾಗಿದೆ.
