The news is by your side.

ಶ್ರೀ ಸಂತ ಸೇನಾ ಮಹಾರಾಜರ 93ನೇ ಪುಣ್ಯತಿಥಿ ಆಚರಣೆ

 

ಬೆಳಗಾವಿ: ಶ್ರೀ ಸಂತ ಸೇನಾ ಮಹಾರಾಜರ 93ನೇ ಪುಣ್ಯತಿಥಿಯನ್ನ ಈ ಬಾರಿ ಶಹಾಪುರ ಗಾಢೇ ಮಾರ್ಗದಲ್ಲಿರುವ ಶ್ರಿ ಸಂತ ಸೇನಾ ಮಹಾರಾಜ ಸಮಾಜೋಪಯೋಗಿ ಸಂಘದ ವತಿಯಿಂದ ಸರಳವಾಗಿ ಆಚರಿಸಲಾಯಿತು.
ಇಂದಿಲ್ಲಿ ಬೆಳಗಾವಿಯ ಶಹಾಪುರ ಗಾಢೇ ಮಾರ್ಗದಲ್ಲಿರುವ ಶ್ರಿ ಸಂತ ಸೇನಾ ಮಹಾರಾಜ ಸಮಾಜೋಪಯೋಗಿ ಸಂಘದ ವತಿಯಿಂದ ಪ್ರತಿವರ್ಷದಂತೆ ಈ ಬಾರಿಯೂ ಶ್ರಿ ಸಂತ ಸೇನಾ ಮಹಾರಾಜರ 93ನೇ ಪುಣ್ಯತಿಥಿಯನ್ನ ಈ ಬಾರಿ ಕೋರೊನಾ ಹಿನ್ನೆಲೆ ಸರಳವಾಗಿ ಆಚರಿಸಲಾಯಿತು. ಪುಣ್ಯತಿಥಿಯ ನಿಮಿತ್ಯ ಹ.ಭ.ಪ. ಮಾರುತಿ ಪಾಟೀಲರ ಕೀರ್ತನೆ ನಡೆಯಿತು.
ಹ.ಭ.ಪ ಭಾನುದಾಸ ಪವಾರ ಅವರ ನೇತೃತ್ವದಲ್ಲಿ ಈ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಉಮೇಶಮುಗಳಿಕರ, ಸಂಜಯ ಭೋಗುಳಕರ, ಸಂದೀಪ ಜಾಧವ,ಅಮರ ಕಡಗೋವೆಕರ, ಸಂತೋಷ ಶಿವಣಗೇಕರ, ಪ್ರಸಾದ ಸಕಪಾಳ, ಸುನೀಲ ಸಾರಂಗ, ರಾಜೇಂದ್ರ ಸೂರ್ಯವಂಶಿ ಹಾಗೂ ಇತರರು ಉಪಸ್ಥಿತರಿದ್ಧರು

- Advertisement -

Leave A Reply

Your email address will not be published.