The news is by your side.

ಮೂಡಲಗಿ ಧರ್ಮಟ್ಟಿ ರಸ್ತೆ ರಿಪೇರಿ ಯಾವಾಗ ?

ಮೂಡಲಗಿ– ಮೂಡಲಗಿಯಿಂದ ಧರ್ಮಟ್ಟಿಗೆ ಹೋಗುವ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಇಲ್ಲಿ ಸಂಚಾರ ಮಾಡಬೇಕಾದರೆ ಸರ್ಕಸ್ ಮಾಡಬೇಕಾಗಿದೆ.

ಹಲವಾರು ವರ್ಷಗಳಿಂದಲೂ ಈ ರಸ್ತೆ ಹದಗೆಟ್ಟಿದ್ದರೂ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಈಗ ಮಳೆಗಾಲ ಪ್ರಾರಂಭವಾಗಿರುವುದರಿಂದ ರಸ್ತೆ ಸಂಪೂರ್ಣ ಕೆಸರುಮಯವಾಗಿದೆ. ರಸ್ತೆ ಕೂಡ ಇಕ್ಕಟ್ಟಾಗಿದ್ದು ಒಂದು ವಾಹನದ ಎದುರಿಗೆ ಇನ್ನೊಂದು ಬಂದರೆ ವಾಹನ ಜಾರಿ ತಗ್ಗು ಸೇರುವ ಅಪಾಯವಿದೆ.

ಮೂಡಲಗಿಯಿಂದ ಧರ್ಮಟ್ಟಿಗೆ ಹೋಗಬೇಕಾದರೆ ಈ ರಸ್ತೆಯಲ್ಲಿ ಅಂದಾಜು ಇಪ್ಪತ್ತು ಇಕ್ಕಟ್ಟಾದ ಸೇತುವೆಗಳು ಇದ್ದು ಕೆಲವು ಸಲ ಅಪಘಾತಕ್ಕೆ ಕಾರಣವಾಗಿವೆ. ಹೀಗಾಗಿ ಈ ರಸ್ತೆಯಲ್ಲಿ ತಿರುಗಾಡುವವರು ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾಗಿದೆ.

ರಸ್ತೆಯ ರಿಪೇರಿ ಬಗ್ಗೆ ಘಟಪ್ರಭಾ ಎಡದಂಡೆ ಕಾಲುವೆಯ ಅಭಿಯಂತರರಿಗೆ ಫೋನ್ ಮಾಡಿದಾಗ, ಗುರ್ಲಾಪೂರದಿಂದ ಮಸಗುಪ್ಪಿಯವರೆಗೆ 13 ಕಿ.ಮೀ. ರಸ್ತೆಯ ರಿಪೇರಿಗೆ ಪ್ರಪೋಸಲ್ ಸರ್ಕಾರಕ್ಕೆ ಕಳಿಸಿದ್ದು ಇನ್ನೊಂದು ತಿಂಗಳಲ್ಲಿ ಪರವಾನಿಗೆ ಸಿಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಹಲವು ವರ್ಷ ಕಾದಿದ್ದು ಇನ್ನೊಂದೆರಡು ತಿಂಗಳು ಕಾಯಬಹುದು ಆಗಲಾದರೂ ಈ ರಸ್ತೆ ರಿಪೇರಿಯಾಗಿ ಜನರು ಸುರಳೀತವಾಗಿ,ಸುರಕ್ಷಿತವಾಗಿ ಅಡ್ಡಾಡುವಂತಾದರೆ ಸಾಕು ಎಂಬುದು ಜನರ ನಿರೀಕ್ಷೆಯಾಗಿದೆ.

.

 

.

.

 

 

 

 

 

.

 

 

Source

 

 

 

 

 

 

- Advertisement -

Leave A Reply

Your email address will not be published.