The news is by your side.

ಭೂಕುಸಿತದಿಂದ ರೈಲು ಸಂಚಾರ ಸ್ಥಗಿತ

ಬೆಳಗಾವಿ : ಲೋಂಡಾ ಬಳಿಯ ಶಿವಠಾಣಾ ಎಂಬ ಪುಟ್ಟ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಹಳಿಗಳ ಪಕ್ಕ ಭೂಕುಸಿತ ಉಂಟಾಗಿದೆ. ಭೂಕುಸಿತಕ್ಕಿಂದ ಕೇವಲ ಒಂದು ಗಂಟೆ ಮೊದಲೇ ರೈಲೊಂದು ಈ ಮಾರ್ಗದಲ್ಲಿ ಸಂಚರಿಸಿದೆ ಎಂಬ ಮಾಹಿತಿಯೂ ಲಭ್ಯವಿದೆ.
ಲೋಂಡಾ-ಹುಬ್ಬಳ್ಳಿ ಮಧ್ಯೆ ಈ ಘಟನೆ ಸಂಭವಿಸಿದೆ.

ಬೆಳಗಾವಿ ಭಾಗದ ಪಶ್ಚಿಮ ಘಟ ಸೇರಿ ಇಡೀ ಘಟಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಖಾನಾಪುರ ತಾಲೂಕಿನಲ್ಲಿ ಪಾಂಡರಿ ನದಿ ಉಕ್ಕಿ ಹರಿಯುತ್ತಿದೆ.

ಭಾರೀ ಮಳೆಗೆ ಮಲಪ್ರಭಾ ನದಿಯ ಉಪನದಿಗಳೊಂದಾದ ಪಾಂಡ್ರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಡೆಗೋಡೆ ಕೂಡ ನೀರಿನಲ್ಲಿ ಕೊಚ್ಚಿ ಹೋಗಿದೆ. ದುರಸ್ಥಿ ಕಾರ್ಯ ನಡೆದಿದ್ದು ತಾತ್ಕಾಲಿಕವಾಗಿ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.