The news is by your side.

ಮುನವಳ್ಳಿಯ ಮನೆಗಳಿಗೆ‌ ನೀರು‌ : ಮಲಪ್ರಭಾ ನದಿಗೆ 25ಸಾವಿರ ಕ್ಯೂಸೆಕ್ ನೀರು ಬಿಡುಗಡೆ

ಬೆಳಗಾವಿ : ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ 25ಸಾವಿರ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಮುನವಳ್ಳಿಯ ಮನೆಗಳಿಗೆ‌ ನೀರು‌ ನುಗ್ಗಿದೆ. ಪಟ್ಟಣದ‌ ಸಿಂಡಿಕೇಟ್ ಬ್ಯಾಂಕ್, ಅಂಗಡಿ ಮುಂಗಟ್ಟುಗಳಿಗೂ‌ ನೀರು‌ ನುಗ್ಗಿದೆ.

ಮನೆಗಳಿಗೆ ನೀರು ನುಗ್ಗುತ್ತಿರುವುದರಿಂದ ಜನರು ಮನೆ ಮೇಲೇರಿ ಜೀವ ರಕ್ಷಣೆ‌ ಮಾಡಿಕೊಂಡಿದ್ದಾರೆ‌. ಅಲ್ಲದೇ ಯರಗಟ್ಟಿ ‌ಹಾಗೂ ಸವದತ್ತಿ ‌ಸಂಪರ್ಕಿಸುವ ಸೇತುವೆ ಕೂಡ ಮುಳುಗಡೆ ‌ಆಗಿದ್ದು, ಮುನವಳ್ಳಿ ಸಂಪರ್ಕ ಸಂಪೂರ್ಣ ‌ಸ್ಥಗಿತಗೊಂಡಿದೆ.

ನೀರು‌ ಬಿಡುಗಡೆ ಹಿನ್ನೆಲೆ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಸರ್ಕಾರಿ ಶಾಲೆಗೆ ನೀರು ನುಗ್ಗಿದೆ. ಅಲ್ಲದೇ ಗ್ರಾಮದ 20ಕ್ಕೂಅಧಿಕ ಮನೆಗಳು ಜಲಾವೃತಗೊಂಡಿವೆ.
ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದ್ದು, ನದಿ, ಜಲಾಶಯಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಇದರಿಂದ ಕೆಲ ಗ್ರಾಮ, ಪಟ್ಟಣಗಳಿಗೆ ನೀರು ನುಗ್ಗಿದ್ದು, ಜನರಲ್ಲಿ ಪ್ರವಾಹದ ಬೀತಿ ಎದುರುರಾಗಿದೆ.

- Advertisement -

Leave A Reply

Your email address will not be published.