The news is by your side.

ಕೃಷ್ಣಾ ನದಿಗೆ ಪ್ರವಾಹ ಸಾಧ್ಯತೆ : ಮುನ್ನೆಚ್ಚರಿಕೆಗೆ ಸೂಚನೆ

ಬೆಳಗಾವಿ : ರಾಜ್ಯದಲ್ಲಿ ಕೃಷ್ಣಾ ನದಿಗೆ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು ಎಚ್ಚರಿಕೆ ಸೂಚನೆ ನೀಡಲಾಗಿದೆ. ಮುಂದಿನ 48 ಗಂಟೆ ನಂತರ ಕಲ್ಲೋಳ ಬ್ಯಾರೇಜ್ ನಿಂದ 2.75 ಲಕ್ಷ ಕ್ಯುಸೆಕ್ ನೀರು ಬಿಡುವ ಮುನ್ಸೂಚನೆಯನ್ನು ಮಹಾರಾಷ್ಟ್ರ ನೀಡಿದೆ

ಸತತ ಮಳೆಯಿಂದ ಮಹಾರಾಷ್ಟ್ರ ಅತ್ಯಂತ ದೊಡ್ಡ ಜಲಾಶಯವಾದ ಕೊಯ್ನಾ ದಲ್ಲಿ ನೀರಿನ ಒಳಹರಿವು ಕ್ಷಣಕ್ಷಣಕ್ಕೂ ಹೆಚ್ಚಾಗುತ್ತಿದ್ದು, ನೀರು ಅಪಾಯದ ಮಟ್ಟ ತಲುಪುವ ಮೊದಲೇ ನೀರು ಹೊರಗೆ ಬಿಡಬೇಕಾಗುತ್ತದೆಯಾದ್ದರಿಂದ ಅಲ್ಲಿ ಬಿಟ್ಟ ನೀರು ಮಹಾರಾಷ್ಟ್ರದ ಗಡಿಯಲ್ಲಿರುವ ಕಲ್ಲೋಳ ಜಲಾಶಯಕ್ಕೆ ತಲುಪಲು ಸುಮಾರು 48 ಗಂಟೆ ಬೇಕು, ಹಾಗಾಗಿ ಕಲ್ಲೋಳ ಜಲಾಶಯದಿಂದ 2 ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಕೃಷ್ಣಾ ನದಿಗೆ ಬಿಟ್ಟರೆ ಪ್ರವಾಹ ಖಂಡಿತ. ರಾಜ್ಯದಲ್ಲಿ ಬೆಳಗಾವಿ, ಬಾಗಲಕೋಟೆ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ನದಿ ಹರಿದು ನೆರೆಯ ಆಂಧ್ರಪ್ರದೇಶಕ್ಕೆ ಹೋಗುವದರಿಂದ ನದಿ ಪಾತ್ರದ ಜನರಿಗೆ ಅಪಾಯ ಖಂಡಿತ.

ಸಧ್ಯಕ್ಕೆ ಕೃಷ್ಣಾ ನದಿಯ ಒಟ್ಟೂ ಹರಿವು 1,21,081 ಕ್ಯುಸೆಕ್ ಇದ್ದು ಇದರಿಂದ ಅಂತಹ ದೊಡ್ಡ ಪ್ರಮಾಣದ ಅಪಾಯವಿಲ್ಲ. ಆದರೆ 48 ಗಂಟೆ ನಂತರ 2,75,000 ಕ್ಯುಸೆಕ್ ನೀರನ್ನು ಕಲ್ಲೋಳ ಬ್ಯಾರೇಜ್ ನಿಂದ ಹೊರಬಿಡುವ ಮುನ್ಸೂಚನೆ ನೀಡಲಾಗಿದೆ. ಇದು ನದಿ ಪಾತ್ರದಲ್ಲಿ ದೊಡ್ಡ ಸಮಸ್ಯೆಯನ್ನು ತಂದೊಡ್ಡಲಿದೆ.

ಇಂದು ಬೆಳಗ್ಗೆ 8 ಗಂಟೆ ವೇಳೆಗೆ ಕೊಯ್ನಾ ಜಲಾಶಯದಿಂದ  55,958 ಕ್ಯುಸೆಕ್, ಕನ್ಹೇರಿಯಿಂದ 7118, ವಾರ್ಣಾದಿಂದ 14486,  ಅಲದೇ ದೂಧಗಂಗಾದಿಂದ 12950,  ರಾಧಾನಗರಿಯಿಂದ 7112, ತುಳಸಿ 884 ಕಸಾರಿ 1750 ದುಂಬಾಳ್ಕೆವಾಡಿ 3316 ಉರಿಮೂಡಿ 4330, ದುಮ್ 1094 ತರಳಿ 4500 ಗುರೆಘರ್ ಮುಂತಾದ ಚಿಕ್ಕ ಜಲಾಶಯಗಳಿಂದಲೂ ನೀರು ರಾಜ್ಯದ ಕೃಷ್ಣಾ ನದಿ ಸೇರುತ್ತಿದೆ.

ಇಂದು ಬೆಳಗ್ಗೆ 9 ಗಂಟೆಗೆ ಆಲಮಟ್ಟಿ ಜಲಾಶಯದ ಮಟ್ಟ 518.77 ಮೀಟರ್. ಒಳಹರಿವು   1, 29, 722 ಕ್ಯುಸೆಕ್  2, 50, 000 ಕ್ಯುಸೆಕ್  ಆಲಮಟ್ಟಿ ಜಲಾಶಯದಲ್ಲಿ 110.285 ಟಿಎಮ್ ಸಿ ಸಂಗ್ರಹವಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.