The news is by your side.

ಖಾನಾಪೂರ-ಹತ್ತರಗುಂಜಿ,ಹಿರೇಮುನವಳ್ಳಿ-ಅವರೋಳ್ಳಿ,ಲೋಂಡಾ-ಗುಂಜಿ, ರಸ್ತೆಗಳು ಬಂದ್

ಬೆಳಗಾವಿ: ಸತತ ಮಳೆಯಿಂದ ಖಾನಾಪೂರ ತಾಲೂಕು ತತ್ತರಿಸಿ ಹೋಗಿದ್ದು ತಾಲೂಕಿನಾದ್ಯಂತ ಕಳೆದ ಎರಡು ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಎಲ್ಲ ನದಿ, ಹಳ್ಳ ತುಂಬಿ ಹರಿಯುತ್ತಿರುವ ಹಿನ್ನೆಲೆಯಲ್ಲಿ 50ಕ್ಕೂ ಹೆಚ್ಚು ಗ್ರಾಮಗಳು ಸಂಪರ್ಕ ಕಡಿತಗೊಂಡಿವೆ.

ಮಲಪ್ರಭಾ, ಪಾಂಡರಿ ನದಿಯಲ್ಲಿ ಅಪಾಯದ ಮಟ್ಟದಲ್ಲಿ ನೀರು ಹರಿಯುತ್ತಿದೆ.

ಕೆಲವು ರಸ್ತೆ, ಸೇತುವೆಗಳು ಜಲಾವೃತ ಆಗಿರುವುದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.

ಖಾನಾಪೂರ-ಹೆಮ್ಮಡಗಾ ಮಾರ್ಗದ ಅಲಾತ್ರಿ ಹಳ್ಳದ ಸೇತುವೆ, ಖಾನಾಪೂರ-ಹತ್ತರಗುಂಜಿ, ಹಿರೇಮುನವಳ್ಳಿ-ಅವರೋಳ್ಳಿ,ಲೋಂಡಾ-ಗುಂಜಿ, ಚಿಕ್ಕಹಟ್ಟಿಹೊಳಿ-ಚಿಕ್ಕಮುನವಳ್ಳಿ ಮಾರ್ಗಗಳಲ್ಲಿರುವ ನದಿ,ಹಳ್ಳ ಸೇತುವೆಗಳ ಮೇಲೆ ನೀರು ಹರಿದು ರಸ್ತೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ಶಿವಠಾಣ ರೈಲು ನಿಲ್ದಾಣದ ಬಳಿ ಲೋಂಡಾ ಹುಬ್ಬಳ್ಳಿ ರೈಲು ಮಾರ್ಗದಲ್ಲಿ ಭೂ ಕುಸಿತಗೊಂಡಿದೆ. ಉಕ್ಕಿ ಹರಿಯುತ್ತಿರುವ ಪಾಂಡರಿ ನದಿ ಪ್ರವಾಹದಿಂದಾಗಿ ರೈಲ್ವೆ ಹಳಿಗಳ ಪಕ್ಕದ ಭಾಗ ಕುಸಿದಿದೆ..

- Advertisement -

Leave A Reply

Your email address will not be published.