The news is by your side.

ರಾಯಣ್ಣ ಮೂರ್ತಿ ತೆರವಿಗೆ ಪ್ರಬಲ ವಿರೋಧ: ಮರುಪ್ರತಿಷ್ಠಾಪಿಸುವಂತೆ ಆಗ್ರಹ

 

ಗೋಕಾಕ: ಬೆಳಗಾವಿಯ ಪಿರಣವಾಡಿಯಲ್ಲಿ ರಾಯಣ್ಣ ಮೂರ್ತಿ ತೆರವುಗೊಳಿಸಿದ ಹಿನ್ನಲೆಯಲ್ಲಿ ಸೋಮವಾರದಂದು ರಾಯಣ್ಣ ಯುವಕ ಸಂಘದ ಕಾರ್ಯಕರ್ತರು ತಹಶೀಲದಾರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.
ನಮ್ಮ ದೇಶಕ್ಕಾಗಿ ಪ್ರಾಣವನ್ನು ತ್ಯಾಗ ಮಾಡಿದ ಹಾಗೂ ಹಗಲಿರುಳು ದೇಶ ಸೇವೆ ಮಾಡಿದ ಸಂಗೋಳ್ಳಿ ರಾಯಣ್ಣ ಅವರ ಮೂರ್ತಿ ಸ್ಥಾಪಿಸಲು ಪಿರಣವಾಡಿ ರಸ್ತೆಯ ಬಳಿ ಮೂರ್ತಿಯನ್ನು ಪ್ರತಿಷ್ಠಾಪಿಸಲು ಕುರುಬ ಸಮಾಜದ ಮುಖಂಡರುಗಳು ಮುಂದಾಗಿದ್ದು, ದಿ.14ರಂದು ರಾಯಣ್ಣ ಮೂರ್ತಿ ಪ್ರತಿಷ್ಠಾಪಿಸಿದ್ದು ಸ್ಥಳೀಯ ಪೋಲಿಸ್ ಸಿಬ್ಬಂಧಿ ಮೂರ್ತಿಯನ್ನು ತೆರವುಗೊಳಿಸಿದ್ದಾರೆ. ಈ ಘಟನೆ ಯಾವುದೇ ಕಾರಣಕ್ಕೂ ರಾಜ್ಯದ ಜನತೆ ಕ್ಷಮಿಸುವದಿಲ್ಲ. ಕೂಡಲೇ ಮೂರ್ತಿ ಮರುಪ್ರತಿಷ್ಠಾಪಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಲಕ್ಷ್ಮಣ ಮುಸಗುಪ್ಪಿ, ಲಕ್ಕಪ್ಪ ಮಾಳಗಿ, ಶಿವು ಮುತ್ತೆಪ್ಪಗೋಳ, ಪ್ರವೀಣ ಚಕಡಿ, ಕಿರಣ ಹುಲಮನಿ, ವಿಠ್ಠಲ ವಾಲಿಕಾರ, ಸಿದ್ದು ಕೆಂಪನ್ನವರ, ಅಪ್ಪಣ್ಣ ಕಟ್ಟಿಕಾರ, ಯಲ್ಲಪ್ಪ ಗೌಡರ, ಆನಂದ ವಾಲಿಕಾರ, ರಾಕೇಶ ಹುಲಮನಿ, ರಾಜು ನಂದಿ ಸೇರಿದಂತೆ ಅನೇಕರು ಇದ್ದರು.

- Advertisement -

Leave A Reply

Your email address will not be published.