The news is by your side.

ಗೋಶಾಲೆಗಳ ಸಂಕಷ್ಟ: 200 ಕೋಟಿ ರೂ. ನಿರ್ವಹಣಾ ನಿಧಿಗೆ ಪೇಜಾವರ ಶ್ರೀ ಆಗ್ರಹ

 

 

ಉಡುಪಿ: ದೇಶದ ಗೋಶಾಲೆಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದು ತುರ್ತಾಗಿ ಕನಿಷ್ಠ 200 ಕೋಟಿ ರೂ. ನಿರ್ವಹಣಾ ನಿಧಿ ಒದಗಿಸುವಂತೆ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಕೇಂದ್ರ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್‌ಗೆ ಪತ್ರ ಬರೆದಿದ್ದಾರೆ.

ಗೋಶಾಲೆಗಳ ನಿರ್ವಹಣೆ ಅತ್ಯಂತ ವೆಚ್ಚದಾಯಕ. ಕಳೆದ ಆರೇಳು ತಿಂಗಳುಗಳಿಂದ ಕೊರೊನಾದಿಂದಾಗಿ ವಿವಿಧ ಕ್ಷೇತ್ರ ಗಳು ಗಂಭೀರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವಂತೆಯೇ ದೇಶದ ಗೋಶಾಲೆಗಳೂ ತೊಂದರೆಗೊಳಗಾಗಿವೆ. ನೀಲಾವರ, ಕೊಡವೂರು, ಹೆಬ್ರಿಯಲ್ಲಿ ನಾವು ನಡೆ‌ಸುತ್ತಿರುವ ಗೋಶಾಲೆಗಳಿಗೇ ಮಾಸಿಕ ಅಂದಾಜು 35 ಲಕ್ಷ ರೂ. ನಿರ್ವಹಣಾ ವೆಚ್ಚ ಇದೆ. ಅದೇ ರೀತಿ ಯಲ್ಲಿ ಇದಕ್ಕೂ ದೊಡ್ಡ ಅಥವಾ ಸಣ್ಣ ಮಟ್ಟದ ಗೋಶಾಲೆಗಳನ್ನು ಅನೇಕ ಮಠ ದೇವಸ್ಥಾನ ಹಾಗೂ ಮಹನೀಯರು ಯಾವುದೇ ಪ್ರತಿ ಫ‌ಲಾಪೇಕ್ಷೆಯಿಲ್ಲದೆ ಕರ್ತವ್ಯದ ದೃಷ್ಟಿ
ಯಿಂದ ನಡೆಸುತ್ತಾ ಲಕ್ಷಾಂತರ ಗೋವುಗಳನ್ನು ಪೋಷಿಸುತ್ತಿದ್ದಾರೆ.

ಧರ್ಮಾಭಿಮಾನಿಗಳ ಸಹಕಾರದಿಂದ ಇದು ಸಾಧ್ಯವಾಗುತ್ತಿತ್ತು. ಆದರೆ ಪ್ರಸ್ತುತ ಭಕ್ತರ ದೇಣಿಗೆಯೂ ಅಷ್ಟಾಗಿ ಬರುತ್ತಿಲ್ಲ. ವಿಪರೀತ ಮಳೆಯ ಕಾರಣ ಮೇವಿನ ಸಂಗ್ರಹಣೆಯೂ ದುಸ್ತರವಾಗುತ್ತಿದೆ. ಬೇರೆ ಬೇರೆ ಕ್ಷೇತ್ರ ಗಳಿಗೆ ಸರಕಾರವು ಆರ್ಥಿಕ ಪ್ಯಾಕೇಜ್‌ ಘೋಷಿಸಿದಂತೆ ಗೋಶಾಲೆಗಳಿಗೂ ಕನಿಷ್ಠ 200 ಕೋ.ರೂ. ಆದರೂ ತುರ್ತಾಗಿ ನೀಡಬೇಕು ಎಂದು ಶ್ರೀಗಳು ಆಗ್ರಹಿಸಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.