The news is by your side.

ಜೂಗಳ, ಮಂಗಾವತಿ, ಶಹಾಪೂರ ಗ್ರಾಮಗಳಿಗೆ ಪ್ರವಾಹದ ಆತಂಕ

ಕಾಗವಾಡ :ಕೃಷ್ಣನದಿಯ ನೀರು ಹೆಚ್ಚಾಗುತ್ತಿರುವುದರಿಂದ ಜೂಗಳ, ಮಂಗಾವತಿ, ಶಹಾಪೂರ ಗ್ರಾಮದ ಜನರಿಗೆ ಪ್ರವಾಹ ಆತಂಕ ಎದುರಾಗಬಹುದು. ಅದಕ್ಕಾಗಿ ದಯಮಾಡಿ ಜಾನುವಾರುಗಳೊಂದಿಗೆ ಶಿಪ್ಟ್ ಆಗುವಂತೆ ಕಾಗವಾಡ ಪಿಎಸ್ ಐ ಹಣಮಂತ ಧರ್ಮಟ್ಟಿ ಮನವಿ ಮಾಡಿಕೊಂಡರು

ಕೃಷ್ಣಾ, ವೇದಗಂಗಾ ದೂಧಗಂಗಾ ನದಿಗಳು ಅಪಾಯದ ಮಟ್ಟ ಮೀರಿ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗೃತವಾಗಿ ನದಿ ತೀರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಅವರು ಧ್ವನಿ ವರ್ಧಕ ಮೂಲಕ ಗ್ರಾಮೀಣ ಜನರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ನದಿಗಳ, ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಇದರಿಂದ ಚಿಕ್ಕೋಡಿ ಉಪವಿಭಾಗದಲ್ಲಿ ಪ್ರವಾಹದ ಭೀತಿ ಹೆಚ್ಚಾಗಿದೆ.

- Advertisement -

Leave A Reply

Your email address will not be published.