The news is by your side.

ಶ್ರೀಶೈಲಂ ಮಲ್ಲಿಕಾರ್ಜುನ ದರ್ಶನಕ್ಕೆ ಅವಕಾಶ

ಕರ್ನೂಲ್: ಶ್ರೀ ಶೈಲಂ ದೇವಸ್ಥಾನ ಆಡಳಿತ ಮಂಡಳಿ ಶುಕ್ರವಾರ ದೇವಸ್ಥಾನವನ್ನು ಸಂಪೂರ್ಣ ಸ್ಯಾನಿಟೈಸ್‌ ಮಾಡಿ ಶನಿವಾರ ಬೆಳಿಗ್ಗೆಯಿಂದ ಭಕ್ತರು ದರ್ಶನ ಪಡೆಯಲು ಅವಕಾಶ ಕಲ್ಪಿಸಿದೆ.

ಕಳೆದ 4 ತಿಂಗಳಿನಿಂದ ಕೊರೊನಾ ವೈರಸ್‌ ಹಾವಳಿಯಿಂದ ದೇಶದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾದ ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯ ಶ್ರೀಶೈಲಂ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನವನ್ನು ಮುಚ್ಚಲಾಗಿತ್ತು.
ಶ್ರಾವಣ ಮಾಸ ಹಿಂದೂಗಳಿಗೆ ಪವಿತ್ರವಾಗಿದೆ. ಈ ವೇಳೆ
ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಜನರು ಶ್ರೀಶೈಲಂಗೆ ಭೇಟಿ ನೀಡುತ್ತಾರೆ. ಸಪ್ತ ನದಿಗಳ ಸಂಗಮ ಪಾತಾಳಗಂಗೆಯಲ್ಲಿ ಪುಣ್ಯಸ್ನಾನ ಮಾಡಿ ಸಾಕ್ಷಿ ಗಣಪತಿ, ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ, ಶಿಖರೇಶ್ವರ ಸೇರಿದಂತೆ ಹಲವಾರು ದೇವಸ್ಥಾನಗಳಿಗೆ ತೆರಳಿ, ದರ್ಶನ ಪಡೆಯುತ್ತಾರೆ.

- Advertisement -

Leave A Reply

Your email address will not be published.