The news is by your side.

ಯಕ್ಸಂಬಾ-ಧಾಣವಾಡ ಸೇರಿ ಎಲ್ಲಾ ಪ್ರಮುಖ ಸೇತುವೆ ಮುಳುಗಡೆ

 

ಚಿಕ್ಕೋಡಿ : ಮಂಗಳವಾರ ಯಕ್ಸಂಬಾ-ಧಾಣವಾಡ ಸೇತುವೆ ಮುಳುಗಡೆಯಾಗಿದೆ.
ಕೃಷ್ಣಾ ನದಿಗೆ ಯಡೂರ ಬಳಿ ಅಡ್ಡಲಾಗಿ ನಿರ್ಮಿಸಲಾಗಿರುವ ಯಡೂರ-ಕಲ್ಲೋಳ, ದೂಧಗಂಗಾ ನದಿಗೆ ಮಲಿಕವಾಡ ಗ್ರಾಮದ ಬಳಿ ನಿರ್ಮಿಸಲಾಗಿರುವ ಮಲಿಕವಾಡ-ದತ್ತವಾಡ ಸೇತುವೆ ಮತ್ತು ವೇಧಗಂಗಾ ನದಿಗೆ ಅಡ್ಡಲಾಗಿರುವ ಸಿದ್ನಾಳ-ಹುನ್ನರಗಿ, ಕಾರದಗಾ-ಬೋಜ, ಬೋಜವಾಡಿ-ಕುನ್ನೂರ, ಜತ್ರಾಟ-ಬಿವಶಿ, ಸಿದ್ನಾಳ-ಅಕ್ಕೋಳ ಸೇರಿದಂತೆ ಕೆಳಹಂತದ 7 ಸೇತುವೆಗಳು ಜಲಾವೃತ್ತಗೊಂಡು ಸಂಪರ್ಕ ಕಡಿತಗೊಂಡಿದ್ದವು. ಯಕ್ಸಂಬಾ-ಧಾಣವಾಡ ಸೇತುವೆ ಜಲಾವೃತಗೊಂಡಿದ್ದು, ಒಟ್ಟು 8 ಸೇತುವೆಗಳು ಜಲಾವೃತಗೊಂಡಿವೆ.
ಕೋಯ್ನಾ ಜಲಾಶಯದಿಂದ 59598 ಕ್ಯೂಸೆಕ್, ವಾರಣಾದಿಂದ 12264 ಕ್ಯೂಸೆಕ್, ಕಾಳಮ್ಮಾವಾಡಿಯಿಂದ 7700 ಕ್ಯೂಸೆಕ್ ಮತ್ತು ರಾಧಾನಗರಿಯಿಂದ 4256 ಕ್ಯೂಸೆಕ್ ನೀರು ಸೇರಿದಂತೆ ಒಟ್ಟು 1.81.692 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದೆ. ಆದ ಕಾರಣ ನದಿಗಳ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಈ ಭಾಗದಲ್ಲಿ ಕೆಳ ಹಂತದ 7 ಸೇತುವೆಗಳು ಮುಳುಗಡೆಯಾಗಿದ್ದವು. ಇಂದು ದೂಧಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಯಕ್ಸಂಬಾ-ಧಾಣವಾಡ ಸೇತುವೆ ಮುಳುಗಡೆಯಾಗಿದ್ದು, ಒಟ್ಟು 8 ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.

ಕೃಷ್ಣಾ ನದಿಗೆ ಮಹಾರಾಷ್ಟ್ರದಿಂದ ಹರಿದು ಬರುವ ನೀರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಪ್ಪರಗಿ ಬ್ಯಾರೇಜ್ ಮತ್ತು ಆಲಮಟ್ಟಿ ಜಲಾಶಯದಿಂದ ನೀರನ್ನು ಹೊರಗೆ ಹರಿಬಿಡಲಾಗುತ್ತಿದೆ. ನದಿ ತೀರದಲ್ಲಿ ಪ್ರವಾಹ ಬೀತಿ ಅಲ್ಪ ಕಡಿಮೆಯಾಗಿದೆ. ಆದರೂ ಆಡಳಿತ ಯಂತ್ರ ಜಾಗ್ರತವಾಗಿದ್ದು, ನದಿ ತೀರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.