The news is by your side.

ಮಾಧ್ಯಮ ವರದಿಯಿಂದ ಎಚ್ಚತ್ತು ಸಂತ್ರಸ್ತರಿಗೆ ನೆರವು

 

ಚಿಕ್ಕೋಡಿ: ಇಂದು ಮುಂಜಾನೆಯಿಂದ ಪ್ರವಾಹದ ಮುಂಜಾಗ್ರತೆ ಕ್ರಮಗಳ ಬಗ್ಗೆ ತಾಲೂಕಾಡಳಿತ ದಿವ್ಯನಿರ್ಲಕ್ಷವನ್ನು ವಹಿಸುತ್ತಿದೆ. ಎನ್ನುವ ಸುದ್ದಿಯು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದಂತೆ ಎಚ್ಚೆತುಕೊಂಡ ತಹಶೀಲ್ದಾರ ಸುಭಾಷ ಸಂಪಗಾವಿಯವರು ಇಂಗಳಿ ಗ್ರಾಮದತ್ತ ತೆರಳಿ ಜನರು ಸುರಕ್ಷಿತವಾದ ಸ್ಥಳಕ್ಕೆ ತೆರಳುವಂತೆ ಹಾಗೂ ಪರ್ಯಾಯವಾಗಿ ಸ್ಥಳೀಯ ಬೋಟ್ ವ್ಯವಸ್ಥೆ ಮಾಡಿಸಿ ಜನರು ಆ ನಡುಗಡ್ಡೆಯನ್ನು ಖಾಲಿ ಮಾಡುವಂತೆ ತಹಶೀಲ್ದಾರ ಸಂಪಗಾವಿಯವರು ಜನರಲ್ಲಿ ಖಡಕ ಸೂಚನೆಯನ್ನು ನೀಡಿದ್ದಾರೆ.

ಇನ್ನೂ ಇದೇ ಸಂಧರ್ಭದಲ್ಲಿ ನಡುಗಡ್ಡೆಯಲ್ಲಿ ಸಿಲುಕಿದ ರಮೇಶ ಮುರಚಟೆ ಎನ್ನುವ ವ್ಯಕ್ತಿ ಮಾತನಾಡಿ ಶಾಸಕ ಗಣೇಶ ಹುಕ್ಕೇರಿ ಅವರು ನೀಡಿದ ಬೋಟ್‍ನಿಂದಲೇ ನಾವು ಸುರಕ್ಷಿತವಾದ ಸ್ಥಳಕ್ಕೆ ತೆರಳುತ್ತಿದ್ದೇವೆ ಹೊರತು ತಾಲೂಕಾಡಳಿತ ಯಾವುದೇ ವ್ಯವಸ್ಥೆ ಮಾಡಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಒಟ್ಟಾರೆ ಚಿಕ್ಕೋಡಿ ತಾಲೂಕಾಡಳಿತ ಪ್ರವಾಹದ ಮುನ್ಸೂಚನೆ ಸಿಗುತ್ತಿದ್ದಂತೆ ನದಿತೀರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವ ವ್ಯವಸ್ಥೆ ಕಲ್ಪಿಸಿಕೊಡುವ ಕೆಲಸ ಮಾಡಬೇಕು ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.