The news is by your side.

ಗೋಕಾಕದಲ್ಲಿ ಮತ್ತೆ ನೆರೆ: ಉಪ್ಪಾರ ಓಣಿ, ಕುಂಬಾರ ಓಣಿಗೂ ನುಗ್ಗಿದ ನೀರು

 

ಗೋಕಾಕ: ಇಂದು ನೆರೆ ನೀರು ವಸತಿ ಪ್ರದೇಶಗಳಿಗೆ ನುಗ್ಗಿದ್ದು ಜನರ ಜೀವನವನ್ನು ಅಸ್ತವ್ಯಸ್ತ ಮಾಡಿದೆ. ಇಂದು ಬೆಳಿಗ್ಗೆ ನಗರದ ಮಟನ್ ಮಾರ್ಕೆಟ್ ಉಪ್ಪಾರ ಓಣಿ, ಕುಂಬಾರ ಓಣಿಗೂ ನೀರು ನುಗ್ಗಿದೆ.

ಸಾರ್ವಜನಿಕರು ತಮಗೆ ಬೇಕಾದ ಅಗತ್ಯ ವಸ್ತುಗಳೊಂದಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿರುವ ದೃಶಗಳ ಸಾಮಾನ್ಯವಾಗಿತ್ತು. ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ ನೀರು ನುಗ್ಗಿ ಅಂತ್ಯಕ್ರೀಯೆ ನಡೆಸಲು ಸ್ಥಳವೇ ಇಲ್ಲದಂತಾಗಿದೆ.

ಯಾವುದೇ ರೀತಿಯ ಗಂಜಿಕೇಂದ್ರವಾಗಲೀ ಇನ್ನಾವುದೇ ವ್ಯವಸ್ಥೆ ಯನ್ನಾಗಲೀ ಸರಕಾರ ಸೇರಿದಂತೆ ಯಾರೂ ಮಾಡಿಲ್ಲ ಎಂದು ಮಾಧ್ಯಮ ವರದಿಗಳು ಹೇಳುತ್ತವೆ.

ಇದೇ ರೀತಿ ಇನ್ನೂ ಪ್ರವಾಹ ಹೆಚ್ಚಾದರೇ ಮಾರ್ಕಂಡೇಯ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಚಿಕ್ಕೋಳಿ ಸೇತುವೆ ಕೂಡಾ ಸಂಚಾರ ಬಂದ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ. ಕಳೆದ ವರ್ಷ ನಡೆದ ಪ್ರವಾಹದಲ್ಲಿ ಸಿಲುಕಿದ ಮನೆಗಳಲ್ಲಿ ಕಳವು ನಡೆದಿದ್ದರಿಂದ ಈ ಬಾರಿ ಜನರು ಮುಂಜಾಗೃತೆಯಾಗಿ ತಮ್ಮ ಮನೆಗಳನ್ನು ಕಾವಲು ಮಾಡುತ್ತಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.