The news is by your side.

ಬೆಳಗಾವಿ ಸೌಂಡ್ ಆ್ಯಂಡ್ ಲೈಟ್ ಅಸೋಸಿಯೇಷನ್ ದಿಂದ ಕೊರೊನಾ ಪರಿಹಾರಕ್ಕೆ ಆಗ್ರಹ

 

ಬೆಳಗಾವಿ :;ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಸರ್ಕಾರ ನೆರವು ನೀಡಬೇಕು ಎಂದು ಬೆಳಗಾವಿ ಸೌಂಡ್ ಆ್ಯಂಡ್ ಲೈಟ್ ಅಸೋಸಿಯೇಷನ್ ಮುಖಂಡರು, ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಸೌಂಡ್ ಆ್ಯಂಡ್ ಲೈಟ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರವೀಣ ಪ್ರಭು ಮಾತನಾಡಿ, ಕೊರೋನಾ ಸಂಕಷ್ಟದಿಂದಾಗಿ ಈ ಬಾರಿಯ ಸೀಸನ್‍ನಲ್ಲಿ ಸೌಂಡ್ ಆ್ಯಂಡ್ ಲೈಟ್ ಉದ್ಯಮದ ತಂತ್ರಜ್ಞರು, ಕಾರ್ಮಿಕರಿಗೆ ಕೆಲಸವೇ ಇಲ್ಲ. ಅವರ ಉಪಜೀವನ ಕಷ್ಟವಾಗಿದೆ. ಸರ್ಕಾರ ನೆರವು ನೀಡಬೇಕು ಎಂದು ಆಗ್ರಹಿಸಿದರು.
ಬೆಳಗಾವಿಯಲ್ಲಿ 350ಕ್ಕೂ ಹೆಚ್ಚು ಸೌಂಡ್ ಆ್ಯಂಡ್ ಲೈಟ್ ಉದ್ಯಮ ಸಂಸ್ಥೆಗಳಿವೆ. ಪ್ರತಿ ಸಂಸ್ಥೆಯು ಪ್ರತ್ಯೇಕ ವಹಿವಾಟು ನಡೆಸುತ್ತಿದ್ದು, 8-10 ಕಾರ್ಮಿಕರಿಗೆ ಕೆಲಸ ನೀಡಿವೆ.

- Advertisement -

Leave A Reply

Your email address will not be published.