The news is by your side.

ಸುಶಾಂತ ಸಿಂಗ್ ಆತ್ಮಹತ್ಯೆ ಪ್ರಕರಣ ಸಿಬಿಐ ತನಿಖೆಗೆ

 

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ಬುಧವಾರ ನೀಡಿದ ಮಹತ್ವದ ತೀರ್ಪಿನಲ್ಲಿ ಸುಶಾಂತ ಸಿಂಗ್ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದೆ.
ಇದರಿಂದಾಗಿ ಸುಶಾಂತ್ ಕುಟುಂಬದವರ ಆಗ್ರಹಕ್ಕೆ ಮನ್ನಣೆ ಸಿಕ್ಕಂತಾಗಿದೆ.
ಪ್ರಕರಣದ ವಿಚಾರಣೆಯನ್ನು ಪಟನಾದಿಂದ ಮುಂಬೈಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಪಿಟಿಷನ್ ನಲ್ಲಿ ಇದ್ದ ಅಂಶವನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್​, ಸಿಬಿಐ ತನಿಖೆಗೆ ಪ್ರಕರಣವನ್ನು ವಹಿಸುವ ಎಲ್ಲ ಅಧಿಕಾರವೂ ಬಿಹಾರ ಸರ್ಕಾರಕ್ಕೆ ಇದೆ. ತನಿಖೆಯ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ಸಹಕಾರ ನೀಡಬೇಕು ಎಂದು ಆದೇಶಿಸಿದೆ.
ನ್ಯಾಯಮೂರ್ತಿ ಹೃಷಿಕೇಶ್ ರಾಯ್ ಅವರ ಏಕ ಸದಸ್ಯ ಪೀಠ ಈ ಪಿಟಿಷನ್ ಅನ್ನು ವಿಚಾರಣೆಗೆ ಎತ್ತಿಕೊಂಡಿದೆ. ಮುಂಬೈ ಪೊಲೀಸ್ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದರೂ, ಪಟನಾ ಪೊಲೀಸರು ಎಫ್‌ಐಆರ್ ದಾಖಲಿಸಿರುವುದನ್ನು ದೂರಿನಲ್ಲಿವ ಅಂಶಗಳು ಬಹಿರಂಗಪಡಿಸಿವೆ ಎಂದು ಹೇಳಿದ ನ್ಯಾಯಪೀಠ, ರಿಯಾ ಸಲ್ಲಿಸಿದ್ದ ಪಿಟಿಷನ್ ಅನ್ನು ತಿರಸ್ಕರಿಸಿತು.
ಸುಶಾಂತ್ ಸಿಂಘ್ ಅವರ ತಂದೆ ಕೆಕೆ ಸಿಂಗ್ ಅವರು ರಿಯಾ ಚಕ್ರವರ್ತಿ ವಿರುದ್ಧ ಪಟನಾ ಪೊಲೀಸ್ ಠಾಣೆಯಲ್ಲಿ ಜುಲೈ 25ರಂದು ಕೇಸ್ ದಾಖಲಿಸಿದ್ದರು. ಮಗನ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾಗಿ ಆಕೆಯ ವಿರುದ್ಧ ಆರೋಪ ಮಾಡಿದ್ದರು. ಅಲ್ಲದೇ ಸುಶಾಂತ್ ಖಾತೆಯಿಂದ 15 ಕೋಟಿ ರೂಪಾಯಿಯನ್ನು ತನ್ನ ಖಾತೆಗೆ ಆಕೆ ವರ್ಗಾಯಿಸಿಕೊಂಡಿದ್ದಾಳೆ ಎಂದೂ ದೂರಿದ್ದರು.
ಜೂನ್ 14ರಂದು ಸುಶಾಂತ್​ ಸಿಂಗ್ ರಜಪೂತ್​ (34) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

- Advertisement -

Leave A Reply

Your email address will not be published.