The news is by your side.

ಸದಲಗಾ ಪಟ್ಟಣದಲ್ಲಿ ಮನೆ ಕುಸಿದ ಪರಿಣಾಮ ಓರ್ವ ಸಾವು

ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದಲ್ಲಿ ಭಾರಿ ಮಳೆಗೆ ಮನೆ ಕುಸಿದ ಪರಿಣಾಮ ವ್ಯಕ್ತಿಯೊರ್ವ ಸಾವನ್ನಪ್ಪಿದ ಧಾರುಣ ಘಟನೆ ನಡೆದಿದೆ.
ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವ ಮಳೆಯಿಂದಾಗಿ ಶಿಥೀಲಗೊಂಡಿದ್ದ ಮನೆ ಗೋಡೆಯು ರಾತ್ರಿ ಮಲಗಿದ್ದ ವೇಳೆ ಕುಸಿದು ಬಿದ್ದ ಪರಿಣಾಮ ಸ್ಥಳದಲ್ಲಿಯೇ ಈ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.
ಕಲ್ಲಪ್ಪ ಪರಗೌಡರ(70) ಮೃತ ದುರ್ದೈವಿ.
ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ ಸುಭಾಷ ಸಂಪಗಾವಿ ಭೇಟಿ ನೀಡಿದ್ದಾರೆ.

- Advertisement -

Leave A Reply

Your email address will not be published.