The news is by your side.

ಪಟ್ಟು ಸಡಿಲಿಸದ ರಾಯಣ್ಣ ಅಭಿಮಾನಿಗಳು

 

ಬೆಳಗಾವಿ : ಬುಧವಾರ ಪೊಲೀಸ ಅಧಿಕಾರಿಗಳು ರಾಯಣ್ಣ ಅಭಿಮಾನಿ ಗಳೊಂದಿಗೆ ಪೀರನವಾಡಿ ವಿವಾದಕ್ಕೆ ಸಂಬಂಧಿಸಿದಂತೆ ನಡೆಸಿದ ಸಭೆ ಸಂಧಾನ ವಿಫಲವಾಗಿದೆ.
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗುಂಟೆ ಜಾಗ ಕೊಡಿಸಲಾಗುತ್ತದೆ. ಆ ಸ್ಥಳದಲ್ಲಿ ಮೂರ್ತಿ ಸ್ಥಾಪನೆ ಮಾಡಿಕೊಳ್ಳ‌ಬೇಕೆಂಬ ಸಲಹೆಯನ್ನು ಅಭಿಮಾನಿಗಳು ತಿರಸ್ಕರಿಸಿದರು ಎನ್ನಲಾಗಿದೆ.
ಹಲವು ವರ್ಷಗಳಿಂದ ಪೀರನವಾಡಿ ವೃತ್ತದಲ್ಲಿ ಮೂರ್ತಿ ಪ್ರತಿಷ್ಠಾಪನೆಗೆ ಹೋರಾಟ ನಡೆಸಿದ್ದೆವೆ. ಅಲ್ಲಿಯೇ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ ಕೊಡಿ ಎಂದು ರಾಯಣ್ಣ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.
ಈ ವಿವಾದ ಕುರಿತು ಸಿದ್ದರಾಮಯ್ಯ ಅವರು ಸಹ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ವಿವಾದವನ್ನು ಬಗೆ ಹರಿಸಿಕೊಳ್ಳಿ ಎಂದು ಟ್ವಿಟ್ ಕೂಡಾ ಮಾಡಿದ್ದರು. ಈ ಹಿನ್ನೆಲೆ ಸಭೆ ನಡೆದಿತ್ತು. ಆದ್ರೆ ಸಭೆ ವಿಫಲವಾಗಿದೆ.

- Advertisement -

Leave A Reply

Your email address will not be published.