The news is by your side.

ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿ ದೇವಸ್ಥಾನಕ್ಕೆ ನೀರು : ಗೋಕಾಕ ಸಂಚಾರ ಅಸ್ತವ್ಯಸ್ತ

 

ಗೋಕಾಕ್:ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳ ನೆರೆಯಿಂದಾಗಿ ಗೋಕಾಕ ನಗರ ಹಾಗೂ ತಾಲೂಕಿನಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ಥಗೊಂಡಿದೆ.
ಗೋಕಾಕ್- ಸಂಕೇಶ್ವರ, ಗೋಕಾಕ್- ಕೊಣ್ಣುರು ರಸ್ತೆ ಸಂಪರ್ಕ ಕಡಿತಗೊಂಡಿದೆ. ಲೋಳಸೂರು ಸೇತುವೆ ಮೇಲೆ ನೀರು ಬಂದಿದ್ದು ಸಂಚಾರಕ್ಕೆ ಅಡೆತಡೆಯಾಗಿದೆ. ಗೋಕಾಕ್ ಯರಗಟ್ಟಿ, ಕಡಬಗಟ್ಟಿ ರಸ್ತೆ ಸಂಚಾರ ಮಾತ್ರ ಆರಂಭವಿದೆ.
ಗೋಕಾಕ್ ತಾಲೂಕಿನ ಅಡಿಬಟ್ಟಿ, ಚಿಕಡೊಳ್ಳಿ, ಮೆಳವಂಕಿ, ಹಡಗಿನಾಳ, ಉದಗಟ್ಟಿ ಗ್ರಾಮಗಳಿಗೆ ಜಲಾವೃತದ ಭೀತಿ ಎದುರಾಗಿದೆ. ಈಗಾಗಲೇ ಗ್ರಾಮಗಳಿಗೆ ಜಲದಿಗ್ಭಂಧನ ಉಂಟಾಗಿದೆ. ಜನರ ಗ್ರಾಮವನ್ನು ಬಿಟ್ಟು ಪರಿಹಾರ ಕೇಂದ್ರಗಳ ಕಡೆ ಮುಖ ಮಾಡುತ್ತಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದ ಗ್ರಾಮದ ಬಳಿಯಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜನೆ ಮಾಡಲಾಗಿದೆ.
ಗೋಕಾಕ್ ತಾಲೂಕಿನ ಉದಗಟ್ಟಿ ಗ್ರಾಮದ ಉದ್ದಮ್ಮ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಇನ್ನೂ ಉದಗಟ್ಟಿ ಗ್ರಾಮಕ್ಕೆ ನೀರು ಸುತ್ತುವರೆದಿದ್ದು, ಜನ ಗ್ರಾಮವನ್ನು ಬಿಟ್ಟು ಹೊರ ಬರುತ್ತಿದ್ದಾರೆ. ನೀರಿನಲ್ಲಿ ನಡೆದುಕೊಂಡು ಬಂದ ಪರಿಹಾರ ಕೇಂದ್ರಕ್ಕೆ ಸೇರಿಕೊಳ್ಳುತ್ತಿದ್ದಾರೆ.
ಘಟಪ್ರಭಾ ನದಿಯಲ್ಲಿ ನೀರಿನ ಮಟ್ಟ ಇದೀಗ ಮತ್ತೆ ಏರಿಕೆಯಾಗುವ ಭೀತಿ ಎದುರಾಗಿದೆ. ನೀರು ಕಡಿಮೆಯಾಗದೇ ಇದ್ರೆ ಮತ್ತಷ್ಟು ಗ್ರಾಮಗಳಿಗೆ ಪ್ರವಾಹ ಭೀತಿ ಸೃಷ್ಠಿಯಾಗಲಿದೆ. ಈಗಾಗಲೇ ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಪ್ರಮಾಣದ ಮೇಲೆ ಪ್ರವಾಹದ ಮಟ್ಟ ನಿರ್ಧಾರವಾಗಲಿದೆ.

- Advertisement -

Leave A Reply

Your email address will not be published.