ಬೆಳಗಾವಿ: ಸಂಗೊಳ್ಳಿ ರಾಯಣ್ಣ ಸೊಸೈಟಿಯ ಬಹುಕೋಟಿ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಆನಂದ ಅಪ್ಪುಗೋಳ ಸೇರಿದಂತೆ
13 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.
ಬೆಳಗಾವಿಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ.
ಸಿಐಡಿ ಡಿವೈಎಸ್ಪಿ ಪುರುಷೋತ್ತಮ ನೇತೃತ್ವದ ತಂಡ ಪ್ರಕರಣ ಕುರಿತು ಸುದೀರ್ಘ ತನಿಖೆ ನಡೆಸಿದ್ದು,
ಆನಂದ ಅಪ್ಪುಗೋಳ ಸೇರಿ ಆಡಳಿತ ಮಂಡಳಿಯ 13 ಜನ ನಿರ್ದೇಶಕರು ಗ್ರಾಹಕರ ಠೇವಣಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಕೂಲಿ -ನಾಲಿ ಮಾಡುವವರೂ ಹಿಡಿದು ಶ್ರೀಮಂತರು ಹಾಗೂ ಅಧಿಕಾರಿಗಳಿಂದ ಹಣ ದ್ವಿಗುಣಗೊಳಿಸುವ ಆಮೀಷವೊಡ್ಡಿ 275 ಕೋಟಿ ಸ್ಥಿರ ಠೇವಣಿ ಪಡೆಯಲಾಗಿತ್ತು. ಈ ಹಣವನ್ನು ಆನಂದ ವಂಚನೆ ಮಾಡಿ, ಎಲ್ಲ ಹಣವನ್ನು ಸ್ವಂತಕ್ಕೆ ಬಳಸಿ ಗ್ರಾಹಕರಿಗೆ ವಂಚಿಸಿದ್ದರು.
ಈ ಕುರಿತು ಸಿಐಡಿಯಿಂದ ಮೊದಲ ಹಂತದ ತನಿಖೆ ಪೂರ್ಣಗೊಂಡಿದ್ದು, ನ್ಯಾಯಾಲಯಕ್ಕೆ 2,063 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
