The news is by your side.

ಕೊರೊನಾ: 1000 ಮಂದಿಯ ಸ್ಥಿತಿ ಚಿಂತಾಜನಕ: ಎಚ್ ಕೆ ಪಾಟೀಲ್

ಬೆಂಗಳೂರು; ರಾಜ್ಯದಲ್ಲಿ ಒಂದು ಸಾವಿರ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ನೀಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಆತಂಕ ವ್ಯಕ್ತಪಡಿ ಸಿದ್ದಾರೆ.

ಕೊರೊನಾದಿಂದ ಜನ ಇನ್ನೂ ಹೆಚ್ಚಾಗಿ ಸಮಸ್ಯೆಗೆ ತುತ್ತಾಗುತ್ತಲೇ ಇದ್ದಾರೆ. ಬೆಡ್, ಸಿಬ್ಬಂದಿ, ಔಷಧಿಗಳ ಕೊರತೆ 25 ಸಾವಿರ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಾಗುತ್ತಿಲ್ಲ. ಇದರಲ್ಲಿ ಒಂದು ಸಾವಿರ ಮಂದಿಯ ಸ್ಥಿತಿ ತುಂಬಾ ಚಿಂತಾಜನಕವಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲೂ ಆಕ್ಸಿಜನ್ ಕೊರತೆ ಇದೆ. ಆಕ್ಸಿಜನ್ ಕೊರತೆಯಿಂದ ಒಂದೇ ಒಂದು ಜೀವ ಹೋದರೂ ಅದಕ್ಕೆ ರಾಜ್ಯ ಸರ್ಕಾರವೇ ಹೊಣೆಯಾಗಲಿದೆ ಎಂದು ಅವರು ಹೇಳಿದ್ದಾರೆ.

ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಟಿ ಮಾತನಾಡಿದ ಅವರು,ರಾಜ್ಯ ಸರ್ಕಾರ ಅದ್ಯಾವುದೋ ಗುಜರಾತ್ನಲ್ಲಿರುವ ಮೆಹತಾ ಕಂಪನಿಗೆ ಆಕ್ಸಿಜೆನ್ ಪೂರೈಕೆಗೆ ಟೆಂಡರ್ ಕೊಟ್ಟು ತೊಂದರೆ ಮಾಡಿಕೊಂಡಿದ್ದಾರೆ. ಮೆಹತಾ ಕಂಪನಿಯಿಂದ ರಾಜ್ಯಕ್ಕೆ ಇನ್ನೂ ಆಕ್ಸಿಜನ್ ಪೂರೈಕೆ ಮಾಡಿಲ್ಲ.

ದೂರದೃಷ್ಟಿಯಿಂದ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಿಕೊಂಡಿಲ್ಲ. ರಾಜ್ಯದಲ್ಲಿ 24,500 ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದ್ದು,ತುರ್ತಾಗಿ ಒಂದು ಸಾವಿರ ಜನರಿಗೆ ಆಕ್ಸಿಜನ್ ಕೊಡಲೇಬೇಕಾದ ಅತ್ಯಂತ ಅನಿವಾರ್ಯ ಸ್ಥಿತಿ ಇದೆ. ಆದರೆ ಸರ್ಕಾರ ಕೇವಲ 12 ಸಾವಿರ ಆಕ್ಸಿಜನ್ ಬೆಡ್ ಸಿದ್ದಪಡಿಸಿದೆ.ಎಲ್ಲೆಡೆ ಆಕ್ಸಿಜನ್ ಕೊರತೆ ಕಂಡು ಬರುತ್ತಿದ್ದು, 80
ಕಿಲೋಮೀಟರ್ ಹಾಗೂ 100 ಕಿಲೋ ಮೀಟರ್ ಮೇಲೆ ಸರಬರಾಜು ಮಾಡಲಾಗದು ಎಂಬ ತಾಂತ್ರಿಕ ಕಾರಣವನ್ನು ಸರ್ಕಾರ ಕೊಡಬಹುದು ಎಂದು ಅವರು ಆರೋಗ್ಯ ಇಲಾಖೆ
ಅಧಿಕಾರಿಗಳಿಗೆ ತಿಳುವಳಿಕೆ ನೀಡಿದ್ದಾರೆ.

ಬಿಇಐಸಿಯಲ್ಲಿ ಕೋವಿಡ್ ಸೆಂಟರ್ ಮಾಡಿದ್ದಾರೆ ಅಲ್ಲಿ ಕುಡಿಯುವ ನೀರಿಲ್ಲ. 15 ರೂಂಗೆ ಒಂದು ಟಾಯ್ಲೆಟ್ ವ್ಯವಸ್ಥೆ ಮಾಡಲಾಗಿದೆ. ಇದು ಸರ್ಕಾರದ ಬೇಜವಾಬ್ದಾರಿತನಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಟೀಕಿಸಿದ್ದಾರೆ.

- Advertisement -

Leave A Reply

Your email address will not be published.