The news is by your side.

ಸುಣಧೋಳಿ ಜಡಿಸಿದ್ದೇಶ್ವರ ದೇವಾಲಯ ಜಲಾವೃತ

ಮೂಡಲಗಿ– ಪ್ರಖ್ಯಾತ ಹಗ್ಗವಿಲ್ಲದೆ ತೇರು ಎಳೆಯುವ ಸುಣಧೋಳಿ ಜಡಿಸಿದ್ದೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.
ಮೂಡಲಗಿ ಸಮೀಪದ ಸುಣದೊಳಿ ಗ್ರಾಮದ ಪ್ರಸಿದ್ಧ ಶ್ರೀ ಜಡಿಸಿದ್ದೇಶ್ವರ ದೇವಸ್ಥಾನಕ್ಕೆ ಮತ್ತೆ ಜಲ ಕಂಟಕ ಎದುರಾಗಿದೆ. ಕಳೆದ ಬಾರಿಯೂ ಈ ದೇವಸ್ಥಾನ ನೀರಿನಿಂದ ಆವೃತವಾಗಿತ್ತು.
ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ಜಡಿಸಿದ್ದೇಶ್ವರ ದೇವಸ್ಥಾನದ ಸುತ್ತಲೂ ನೀರು ಆವರಿಸಿದ್ದು, ಪೂಜಾರಿಗಳು ಮಾತ್ರ ವಿಗ್ರಹ ಪೂಜೆಯನ್ನು ನಿರಂತರವಾಗಿ ಮಾಡುತ್ತಿದ್ದಾರೆ.

ಇತ್ತ ಮೂಡಲಗಿ ಮಾರ್ಗವಾಗಿರುವ ಸುಣಧೋಳಿ ಗ್ರಾಮದ ಸೇತುವೆ ಕೂಡ ಸಂಪೂರ್ಣವಾಗಿ ಮುಳುಗಡೆಯಾಗಿದ್ದು ಸಂಚಾರ ಸ್ಥಗಿತಗೊಂಡಿದೆ ಇದರಿಂದ ಸುಣಧೋಳಿ ಜನತೆಯಲ್ಲಿ ಮತ್ತೆ ಪ್ರವಾಹ ಎದುರಾಗಬಹುದು ಎಂಬ ಆತಂಕ ಮೂಡಿದೆ. .

ಯಾದವಾಡ – ಸಂಗನಕೇರಿ ಸಂಪರ್ಕ ರಸ್ತೆಯ ತಿಗಡಿ ಸೇತುವೆ ಸಂಪೂರ್ಣ ಮುಳುಗಡೆಯಾಗಿದ್ದು ರಾಜ್ಯ ಹೆದ್ದಾರಿಯ ಸಂಚಾರ ಸ್ಥಗಿತಗೊಂಡಿದೆ. ಇಂದು ಮಳೆಯ ಪ್ರಮಾಣದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಮಹಾಪೂರದ ಅಪಾಯ ಸ್ವಲ್ಪ ಕಡಿಮೆಯಾದಂತಾಗಿದೆ. ಇದರಿಂದ ನದಿ ಪಾತ್ರದ ಜನರು ನಿಟ್ಟುಸಿರು ಬಿಟ್ಟಿದ್ದಾರಾದರೂ ಯಾವಾಗಲೂ ಮೋಡ ಮುಸುಕಿದ ವಾತಾವರಣ ಇರುವುದರಿಂದ ಜಲಕಂಟಕದಿಂದ ಸಂಪೂರ್ಣ ಬಿಡುಗಡೆ ಇಲ್ಲವೇನೋ ಎನ್ನಿಸುತ್ತಿದೆ.

Source

- Advertisement -

Leave A Reply

Your email address will not be published.