The news is by your side.

ಕಡಾಡಿಯವರಿಂದ ಸಕ್ಕರೆ ಸಚಿವರಿಗೆ ಮನವಿ

ಮೂಡಲಗಿ: 2020-21ನೇ ಸಾಲಿನ ಹಂಗಾಮಿನ ಕಬ್ಬಿಗೆ ಎಫ್.ಆರ್.ಪಿ (ಫೇರ್ ಆ್ಯಂಡ ರೆಮ್ಯುನೇಷನ್ ಪ್ರೈಸ್ ) ಬೆಲೆ ನಿಗದಿ ಮಾಡುವ ಕುರಿತು ರಾಜ್ಯ ಸಕ್ಕರೆ ಸಚಿವರಾದ ಶಿವರಾಮ ಹೆಬ್ಬಾರ ಅವರನ್ನು ರಾಜ್ಯಸಭಾ ಸದಸ್ಯ, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಅವರು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬುಧವಾರ ಅ-19 ರಂದು ಬೆಂಗಳೂರಿನ ವಿಕಾಸಸೌಧದಲ್ಲಿ ಸಕ್ಕರೆ ಸಚಿವರನ್ನು ಭೇಟಿಯಾಗಿ, ಬಾಕಿ ಉಳಿದಿರುವ ರೈತರ ಹಣವನ್ನು ಶೀಘ್ರವೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತನಾರಾಯಣ, ನಿಕಟಪೂರ್ವ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್ ಶಿವಪ್ರಸಾದ, ಮಂಡ್ಯ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಜೋಗಿಗೌಡ, ಬೆಂಗಳೂರು ದಕ್ಷಿಣ ರೈತ ಮೋರ್ಚಾ ಅಧ್ಯಕ್ಷ ಮುನಿರಾಜುಗೌಡ, ರಾಜ್ಯ ರೈತ ಮುಖಂಡರಾದ ಎಚ್.ಎನ್. ಮಂಜುನಾಥ, ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಈರಣ್ಣ ಅಂಗಡಿ ಸೇರಿದಂತೆ ಬಿಜೆಪಿ ರೈತ ಮೋರ್ಚಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

 

 

 

 

Source

 

- Advertisement -

Leave A Reply

Your email address will not be published.