The news is by your side.

ಕಳೆದ ವರ್ಷದ ಭೀಕರ ಪ್ರವಾಹ ಸಂತ್ರಸ್ತರಿಂದ ಪರಿಹಾರಕ್ಕಾಗಿ ಪ್ರತಿಭಟನೆ

 

ಬೆಳಗಾವಿ: ಕಳೆದ ವರ್ಷ ಭೀಕರ ಪ್ರವಾಹದಿಂದ ಅವರಾದಿ ಗ್ರಾಮದ ದಂಡಪ್ಪನವರ ತೋಟ, ದೊಂಬರ ತೋಟ, ಉರಬಿ ತೋಟ, ಮಾಡಲಗಿಯವರ ತೋಟ ಸೇರಿ ಸುಮಾರು 75 ಮನೆಗಳು ಹಾನಿಗೊಳಗಾಗಿವೆ. ಸರ್ಕಾರ ಘೋಷಣೆ ಮಾಡಿದ 10 ಸಾವಿರ ಪರಿಹಾರ ವರ್ಷ ಕಳೆದರೂ ನಮಗೆ ತಲುಪಿಲ್ಲ. ಹಲವು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಮತ್ತೆ ಇದೀಗ ಪ್ರವಾಹ ಭೀತಿ ಎದುರಾಗಿದ್ದು, ಕೂಡಲೇ ಪರಿಹಾರ ವಿತರಿಸುವಂತೆ
ಅವರಾದಿ ಗ್ರಾಮದ ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಕಳೆದ ವರ್ಷದ ನೆರೆಯಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸುವಂತೆ ಆಗ್ರಹಿಸಿ ಮೂಡಲಗಿ ತಾಲೂಕಿನ ಅರಭಾಂವಿ ಮತಕ್ಷೇತ್ರ ವ್ಯಾಪ್ತಿಯ ಅವರಾದಿ ಗ್ರಾಮದ ನೆರೆ ಸಂತ್ರಸ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉದ್ದವ ಯಲ್ಲಪ್ಪ ಡೊಂಬರ, ಮುತ್ತಪ್ಪ ಡೊಂಬರ, ಚನ್ನಪ್ಪ ಹುನ್ನೂರ, ಲಕ್ಕಪ್ಪ ಗೇಟಿನ, ಹಾಲಪ್ಪ ದುಂಡಪ್ಪ ಗೇಟಿನ, ಹುಸೇನಸಾಬ ಬಾಗವಾನ್, ಮಾನಿಂಗ ಕಾಸರ, ಚನ್ನಪ್ಪ ಹೋಳಿ, ಶಂಕರೆಪ್ಪ ಪಾಟೀಲ್ , ವಿನಯಕ ಬಾಗೇವಾಡಿ ಸೇರಿದಂತೆ ಮುಂತಾದವರು ಇದ್ದರು.

- Advertisement -

Leave A Reply

Your email address will not be published.