The news is by your side.

ಸರಿಯಾಗಿ ತನಿಖೆ ನಡೆಸಿದರೆ ’ಕೊರೋನಾ ಹಗರಣ’ ಎಂಬ ಹೊಸದೊಂದು ಹಗರಣ ಬಯಲಾಗುವ ಸಾಧ್ಯತೆಗಳಿವೆ

.

– *ವಸಂತ್ ಗಿಳಿಯಾರ್*

ಬೆಂಗಳೂರು : ಇದನ್ನು ಮುಖ್ಯಮಂತ್ರಿಗಳು ಗಮನಿಸಬೇಕು ಮತ್ತು ಪ್ರಜ್ಞಾವಂತರು ಅವರ ಗಮನ ಸೆಳೆಯಬೇಕು ಎನ್ನುವ ಉದ್ದೇಶದಿಂದ ಬರೆಯುತ್ತಿದ್ದೇನೆ. ನಾಡಿನ ನಾನಾ ಸಮಸ್ಯೆಗಳ ಕುರಿತು ಸ್ಪಂಧಿಸುವ ಭಾರ್ಗವ ಬಳಗದ ಓರ್ವ ಸಾಮಾನ್ಯ ಸದಸ್ಯ ನಾನು. ಹೆಸರು ವಸಂತ್ ಗಿಳಿಯಾರ್. ರಾಜ್ಯದಲ್ಲಿ ಆನ್ ಲೈನ್ ಗ್ಯಾಂಬ್ಲಿಂಗ್ ವಿರೋಧಿಸಿ ನಾವೆಲ್ಲರೂ ಅಭಿಯಾನವನ್ನ ಮಾಡುತ್ತಿದ್ದೇವೆ. ನೇತ್ರಾವತಿ ಉಳಿಸಿ ಆಂದೋಲನದಲ್ಲಿಯೂ ನಾವು ದೊಡ್ಡ ಧ್ವನಿಯಾಗಿದ್ದೆವು. ಕಂಬಳ, ರೈಲ್ವೆ ಮುಂತಾದ ಹೋರಾಟದಲ್ಲಿ ಯಶ ಕಂಡೆವಾದರೂ ಸಮಾಜದ ನೈಜ ಸಮಸ್ಯೆಗಳ ಕುರಿತು ಎಷ್ಟೇ ಹೋರಾಟ ಮಾಡಿದರೂ ಆಳುವವರು ಎಂದಿಗೂ ಕುರುಡು! ಪ್ರತಿಪಕ್ಷಗಳ ಬಗ್ಗೆ ಇವರ ಗಮನವೇ ಹೊರತು ಆರಿಸಿ ಕಳಿಸಿದ ಪ್ರಜಾ ಸಮೂಹದ ಕುರಿತು ಅಲ್ಲವೇ ಅಲ್ಲ. ನಾನು ಇವತ್ತು ಹೇಳಲು ಹೊರಟಿರುವುದು ಕೊರೋನಾ ಲೂಟಿಯ ಕುರಿತು.

ಶವವನ್ನೇ ಕೊಡಲಿಲ್ಲ!

ನಿನ್ನೆ ಬೆಂಗಳೂರಿನಿಂದ ನನ್ನ ಗೆಳೆಯ ಸಂತೋಷ್ ಕಾವೇರಿ ಕಾಲ್ ಮಾಡಿದರು. ಅಪೋಲೊ ಆಸ್ಪತ್ರೆಯ ಮುಂದೆ ಕೊರೋನಾ ಪೇಶಂಟ್ ಶವ ಕೊಡಲು ನಿರಾಕರಿಸುತ್ತಿದ್ದಾರೆ, ಎಂದು ಪ್ರತಿಭಟಿಸುತ್ತಿದ್ದಾರೆ. ಹನ್ನೆರಡು ಲಕ್ಷ ರೂಪಾಯಿ ಬಿಲ್ ಮಾಡಿದ್ದಾರಂತೆ ಎಂದರು! ನಾನು ತಕ್ಷಣವೇ ಸುವರ್ಣ್ ಸುದ್ದಿ ವಾಹಿನಿಯ ಅಜಿತ್ ಹನುಮಕ್ಕನವರ್ ನಂಬರ್ ಕೊಟ್ಟು ಸಂಪರ್ಕಿಸಿ ಎಂದೆ. ಅಜಿತ್ ಐ.ಪಿ.ಎಸ್ ರೂಪ ಅವರ ಜೊತೆ ಮಾತಾಡಿ ಎಂದು ಅವರ ನಂಬರ್ ಕೊಟ್ಟರು. ಆಸ್ಪತ್ರೆಯವರು ಹಟ ಹಿಡಿದು ಕುಳಿತಿದ್ದರು ಎಂಟು ಲಕ್ಷ ಕಟ್ಟಿದ್ದೀರಿ ಇನ್ನು ನಾಲ್ಕು ಲಕ್ಷ ಕೊಡಲೇ ಬೇಕು ಎಂದು. ಪಿ.ಪಿ.ಇ/ ಕಿಟ್ ಗೆ ಒಟ್ಟು ಎರಡು ಲಕ್ಷ ರೂಪಾಯಿ ಹಾಕಿದ್ದರು ಆಸ್ಪತ್ರೆಯವರು! ಅದೇ ತೆರನಾಗಿ ಆಸ್ಪತ್ರೆಗೆ ಸೇರಿ ಮೂರು ದಿನದಲ್ಲೇ ಮೃತರಾದವರ ಬಳಿ ಏಳು ಲಕ್ಷ ಪಾವತಿಸುವಂತೆ, ಪಾವತಿಸಿದ ನಂತರವೇ ಶವ ನೀಡುವುದು ಎಂದು ಆಸ್ಪತ್ರೆ ತಾಕೀತು ಮಾಡಿತ್ತು! ನಂತರ ಐ.ಪಿ.ಎಸ್. ರೂಪಾ ಮಾತಾಡಿ ದಬಾಯಿಸಿದ ಮೇಲೆ ಶವವನ್ನ ಹಣ ಪಡೆಯದೆ ಬಿಟ್ಟು ಕೊಟ್ಟರು. ಹೋರಾಡಿದ ಸಂತೋಷ್ ಕಾವೇರಿಗೆ ಥ್ಯಾಂಕ್ಯೂ. ಆದರೆ ಈ ಆಸ್ಪತ್ರೆಗಳ ಲೂಟಿಗೆ ಕಡಿವಾಣ ಹಾಕುವವರು ಯಾರು? ಮುಖ್ಯಮಂತ್ರಿಗಳು ಉತ್ತರಿಸಬೇಕು.

ಜ್ವರಗಳೆಲ್ಲಾ ಎಲ್ಲಿ ಹೋದವು?

ಸಣ್ಣದೊಂದು ಶೀತಕ್ಕೆ, ಜ್ವರಕ್ಕೆ ಎಲ್ಲಿಯೂ ಮಾತ್ರೆ ಸಿಗುವುದಿಲ್ಲ! ಡೋಲೋ ತರಹದ ಮಾತ್ರೆ ಕೊಟ್ಟರೆ ಮೆಡಿಕಲ್ ಪರವಾನಿಗೆ ರದ್ದು ಮಾಡಿ ಬಿಡುತ್ತಾರೆ! ಔಷಧೀಯ ಅಧಿಕಾರಿಗಳು ಮೆಡಿಕಲ್ ಮಾಲಿಕರಿಂದ ಲಕ್ಷಾಂತರ ರೂಪಾಯಿ ಲೂಟುತ್ತಲೇ ಇದ್ದಾರೆ! ಶೀತ, ಕೆಮ್ಮು, ಕಫ ಆದರೆ ಸುಮ್ಮನೆ ಬಿಟ್ಟರೆ ಅದು ಉಲ್ಬಣವಾಗುವುದಿಲ್ಲವೆ? ಕಫ ಜಾಸ್ತಿ ಆಯ್ತು ಎಂದು ಆಸ್ಪತ್ರೆಗೆ ಸೇರಿದರೆ ಕೊರೋನಾ ಟೆಸ್ಟ್ ಕಡ್ಡಾಯ! ಟೆಸ್ಟ್ ಆದ ಮೇಲೆ ಅಡ್ಮಿಟ್! ಖಾಸಗಿ ಆಸ್ಪತ್ರೆಯಲ್ಲಿ ಮೂರದಿಂದ ಶುರುವಾಗಿ ಇಪ್ಪತ್ತು ಲಕ್ಷದ ತನಕ ಲೂಟಿ ಆಗುತ್ತದೆ! ಇದಕ್ಕೆ ನಾಡಿನ ದೊರೆಯಾದ ನೀವು ತಾನೆ ಹೊಣೆಗಾರರು?

ಹಿಂದೆಲ್ಲ ಬರುತ್ತಿದ್ದ ಮಳೆಗಾಲದ ಜ್ವರ, ನೆಗಡಿ, ಮಲೇರಿಯಾ, ಡೆಂಗ್ಯೂ ಇದೆಲ್ಲ ಇವಾಗ ಎಲ್ಲಿಗೆ ಹೋದವು? ಪಾರಿನ್ ಟೂರಿಗೆ ಹೋದವೆ? ಬಂದ ಪ್ರಕರಣ ಎಲ್ಲವೂ ಕೊರೋನಾ ಅಂದರೆ ಅದಕ್ಕೆ ಅರ್ಥ ಇದೆಯಾ?

ಕೊರೋನಾಕ್ಕೆ ಏನು ಮೆಡಿಸಿನ್ ಕೇಳಿದರೆ ಏನೂ ಇಲ್ಲ! ಅದು ಹೇಗೆ ಗುಣವಾಗುತ್ತದೆ ಕೇಳಿದರೆ ಅದಾಗೆ ಗುಣ ಆಗೊತ್ತೆ ಅನ್ನೋ ಉತ್ತರ ಬರುತ್ತದೆ. ಮೆಡಿಸಿನ್ ಇಲ್ಲದ ರೋಗಕ್ಕೆ ಲಕ್ಷಾಂತರ ರೂಪಾಯಿ ಹಣವಾದರು ಯಾಕೆ ಸುಲಿಗೆಯಾಗಬೇಕು?

ರಾಜ್ಯದ ಬೊಕ್ಕಸದಿಂದ ಸಾವಿರಾರು ಕೋಟಿ ಹಣ ಲೂಟಿಯಾಗಿದೆ. ಪ್ರತೀ ಜಿಲ್ಲೆಯಲ್ಲಿಯೂ ಆಯಕಟ್ಟಿನ ಜಾಗದಲ್ಲಿ ಅಧಿಕಾರಿ ಲೂಟಿ ಮಾಡಿದ್ದಾನೆ! ಲಾಕ್ ಡೌನ್, ಶೀಲ್ ಡೌನ್ ಪಬ್ಲಿಕ್ ಬಾಯಿಗೆ ಬಿದ್ದಂತಿದೆ! ಯಾರೂ ಪ್ರಶ್ನಿಸುವಂತಿಲ್ಲ!

ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಹದಿನೈದು ದಿನದಿಂದಲೂ ಸಣ್ಣಗೆ ಜ್ವರವಿತ್ತು, ನೆಗಡಿ ಕಫವಿತ್ತು! ಎಕ್ಸರೆ ಮಾಡಿದರೆ ಲಂಗ್ಸ್ ಅಲ್ಲಿ ಕಫ ಬ್ಲಾಕ್ ಆಗಿದ್ದೂ ಸತ್ಯ! ಕಫ ಕರಗುವ ಔಷಧ ಕೊಟ್ಟಿದ್ದರೆ ಸಾಕಿತ್ತು! ಆದರೆ ಖಾಸಗಿ ಆಸ್ಪತ್ರೆಗೆ ಸೇರಿಸಿದ ತಕ್ಷಣ ಕೊರೋನಾ ಪಾಸಿಟೀವ್ ಎಂದರು! ಅಡ್ಮಿಟ್ ಮಾಡಿಕೊಂಡರು. ವಿಧ್ಯಾವಂತ ಆ ವ್ಯಕ್ತಿಗೆ ಕೊಟ್ಟ ಮೆಡಿಸಿನ್ ವಿವರಗಳು ಗೊತ್ತಿವೆ. ಅವರೀಗ ನಾರ್ಮಲ್ ಇದ್ದಾರೆ. ಕಫ ಕಮ್ಮಿಯಾಗಲು ಅವರಿಗೆ ಮೆಡಿಸಿನ್ ಕೊಟ್ಟಿದ್ದರು ಅಷ್ಟೆ! ಆದರೆ ಆಸ್ಪತ್ರೆಯ ಬಿಲ್ ಓಡುತ್ತಲೇ ಇದೆ. ಅವರಿಗೆ ಕೊರೋನಾ ಪಾಸಿಟೀವ್ ಹೌದೇ ಆಗಿದ್ದರೆ ಅವರ ಹೆಂಡತಿಗೆ, ಮಕ್ಕಳಿಗೆ, ಅವರ ಮನೆಯಲ್ಲೇ ಇರುವ ವೃದ್ಧ ತಾಯಿಗೆ ಕೊರೋನಾ ಪಾಸಿಟೀವ್ ಬರಬೇಕಿತ್ತು ತಾನೆ?

ಇಂಥಹ ನೂರಾರು ಉದಾಹರಣೆಗಳನ್ನ ನಾನು ನೀಡಬಲ್ಲೆ! ನನ್ನ ಗೆಳೆಯರೇ ಹಲವರಿದ್ದಾರೆ. ಕೊರೋನ ಎನ್ನುವುದೊಂದು ಲೂಟಿಗೆ ರಹದಾರಿಯಾಗಿದೆ. ಖಾಸಗಿ ಆಸ್ಪತ್ರೆಯಲ್ಲಿ ಐವತ್ತರ ಮೇಲಿನವರನ್ನ ಅಡ್ಮಿಟ್ ಮಾಡಿದರೆ ಅವರನ್ನ ಹದಿನೈದು ದಿನಗಳಾದರೂ ಬಿಡದೆ ವೆಂಟಿಲೇಟರ್ ನಲ್ಲಿದ್ದಾರೆ ಎಂದು ಹಣ ಹೀರಿ ಬಿಡುತ್ತಿರುವುದೂ ಸುಳ್ಳಲ್ಲ! ಐಸಿಯು ರೂಮಿನೊಳಗಿದ್ದೇ ತಲೆ ಕೆಟ್ಟು ಬೇರೆ ಕಾರಣದಿಂದ ಸಾಯುವ ಸಾಧ್ಯತೆಗಳೇ ಹೆಚ್ಚಿವೆ!

ಸಾರ್ವಜನಿಕರಿಗೆ ಎಲ್ಲಿಂದರೂ, ಯಾರಿಂದಲೂ ಸೂಕ್ತ ಮಾಹಿತಿ ದೊರಕುತ್ತಲಿಲ್ಲ! ಎಲ್ಲವನ್ನೂ ಸರಿಯಾಗಿ ತನಿಖೆ ನಡೆಸಿದರೆ ’ಕೊರೋನಾ ಹಗರಣ’ ಎಂಬ ಹೊಸದೊಂದು ಹಗರಣ ಬಯಲಾಗುವ ಸಾಧ್ಯತೆಗಳಿವೆ. ಮುಖ್ಯಮಂತ್ರಿಗಳೇ ನೀವು ಕಟ್ಟುನಿಟ್ಟಾಗಿ ಆದೇಶ ಕೊಡಬಹುದೆ? ಹಾಗಂತ ನಾವು ನೀರೀಕ್ಷಿಸಬಹುದೆ? ಮತ್ತಷ್ಟು ವಿವರಗಳೊಂದಿಗೆ ನಿಮ್ಮ ಮೈಲ್ ವಿಳಾಸಕ್ಕೂ ಪತ್ರವೊಂದನ್ನ ರವಾನಿಸುವೆ. ಪ್ರೀತಿ ಇರಲಿ.

(ವಾಟ್ಸಪ್ ಸಂದೇಶಗಳಿಂದ ಆಯ್ದದ್ದು)

Shree Panjurlli Fine Dine ADD

- Advertisement -

Leave A Reply

Your email address will not be published.