The news is by your side.

ವಾರ್ಡ್ ಗೆ ಒಂದು ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಅವಕಾಶ

 

ಬೆಳಗಾವಿ :: ಸಾರ್ವಜನಿಕ ಗಣೇಶೋತ್ಸವವನ್ನು ನಗರದಲ್ಲಿ ಸರಳ, ಸಂಕ್ಷಿಪ್ತವಾಗಿ ಆಚರಿಸಲು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಈ ಆದೇಶದ ಪ್ರಕಾರವೇ ಗಣೇಶೋತ್ಸವ ಆಚರಿಸಬೇಕು, ಅದಕ್ಕೂ ಮೊದಲು ಪರವಾನಗಿ ಪಡೆಯಬೇಕು. ವಾರ್ಡ್ ಗೆ ಒಂದು ಸಾರ್ವಜನಿಕ ಗಣೇಶೋತ್ಸವಕ್ಕೆ ಮಾತ್ರ ಅವಕಾಶ ಇರುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಹೇಳಿದರು.
ಕೊರೋನಾ ಸೋಂಕು ಪ್ರಸಾರ ತಡೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸರಳ, ಸಂಕ್ಷಿಪ್ತವಾಗಿ ಗಣೇಶೋತ್ಸವ ಆಚರಣೆಗೆ ಅವಕಾಶ ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿ ಬಾರಿ 5-10 ಜನರು ಮಾತ್ರ ಇರಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಿದೆ. ಪ್ರತಿ ವಾರ್ಡ್‍ಗೆ ಒಂದರಂತೆ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು ಸೂಚಿಸಲಾಗಿದೆ.
ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಹೇಳಿದ್ದಾರೆ ಎಂದು ಇನ್‍ನ್ಯೂಸ್‍ ವರದಿ ಮಾಡಿದೆ.

- Advertisement -

Leave A Reply

Your email address will not be published.