The news is by your side.

ಹುಕ್ಕೇರಿ ಬ್ಲಾಕ್ ಕಾಂಗ್ರೆಸ್ ನಿಂದ ಬಿ ಜೆ ಪಿ ವಿರುದ್ಧ ಪ್ರತಿಭಟನೆ

 

 

ಹುಕ್ಕೇರಿ:: ಕಾಂಗ್ರೆಸ್ ಪಕ್ಷದ ಬ್ಲಾಕ್ ಅದ್ಯಕ್ಷ ಅಶೋಕ ಅಂಕಲಗಿ ನೇತೃತ್ವದಲ್ಲಿ ನೂರಾರು ಜನ ಕಾರ್ಯಕರ್ತರು ಹುಕ್ಕೇರಿ ಮಿನಿ ವಿಧಾನಸೌಧದ ಆವರಣದಲ್ಲಿ ಇಂದು ರಾಜ್ಯ ಬಿಜೆಪಿ ಸರಕಾರದ ಜನ ವಿರೋಧಿ ನೀತಿ ಖಂಡಿಸಿ ಪ್ರತಿಭಟನೆ ನಡೆಸಿದರು.
ಮಾಜಿ ಪ್ರದಾನಿ ದಿವಂಗತ ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸ್ ಅವರ ಜನ್ಮ ದಿನಾಚಾರಣೆ ಅಂಗವಾಗಿ ಜನದ್ವನಿ ಕಾರ್ಯಕ್ರಮಗಳ ಅಂಗವಾಗಿ ಈ ಪ್ರತಿಭಟನೆ ನಡೆಯಿತು.
ಮಾದ್ಯಮಗಳೊಂದಿಗೆ ಮಾತನಾಡಿದ ಅಶೋಕ ಅಂಕಲಗಿ ಇಂದು ದಿವಂಗತ ಮಾಜಿ ಪ್ರದಾನಿ ರಾಜೀವ ಗಾಂದಿ ಮತ್ತು ದಿವಂಗತ ಮಾಜಿ ಮುಖ್ಯಮಂತ್ರಿ ದೇವರಾಜ ಅರಸ್ ರವರ ಜನ್ಮ ದಿನಾಚಾರಣೆ ಆಚರಿಸಿ ಜನವಿರೋಧಿ ರಾಜ್ಯ ಸರ್ಕಾರದ ಹಲವಾರು ವೈಫಲ್ಯಗಳಾದ ರೈತರ ಉತ್ಪನ್ನಗಳ ಖರಿದಿಯಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಗೆ ಅವಕಾಶ ಕಲ್ಪಿಸಲು ಎ ಪಿ ಎಂ ಸಿ ಕಾಯ್ದೆಗೆ ತಿದ್ದು ಪಡಿ ಮಾಡಿರುವದನ್ನು ಹಿಂಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಲಾಗುತ್ತಿದೆ ಎಂದರು .
ಭೂಸುಧಾರಣ ಕಾಯ್ದೆತಿದ್ದುಪಡಿ ಎಪಿಎಂಸಿ ಕಾಯ್ದೆ ತಿದ್ದುಪಡಿ, ಕಾರ್ಮಿಕ ಕಾಯ್ದೆ ತಿದ್ದುಪಡಿ,
ಕೊರೊನಾ ಭ್ರಷ್ಟಾಚಾರ, ನೆರೆ ಪರಿಹಾರ ನಿರ್ವಹಣೆಯಲ್ಲಿ ವೈಫಲ್ಯ, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸರ್ಕಾರದ ಜನವಿರೊಧಿ ನೀತಿಗಳ ವಿರುದ್ಧ 2 ಗಂಟೆಗಳ ಕಾಲ ಧರಣಿ ಸತ್ಯಾಗ್ರಹ ನಡೆಸಿ ಬಿ ಜೆ ಪಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ನಂತರ ತಹಸಿಲ್ದಾರ ಅಶೋಕ ಗುರಾಣಿ ಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಉಪಾದ್ಯಕ್ಷೆ ಪಂಕಜಾ ನೆರಲಿ, ಹುಕ್ಕೇರಿ ಬ್ಲಾಕ್ ಅದ್ಯಕ್ಷ ಅಶೋಕ ಅಂಕಲಗಿ, ಕಾರ್ಮಿಕ ವಿಭಾಗದ ಜಿಲ್ಲಾ ಅದ್ಯಕ್ಷ ಮಹೇಶ ಹಟ್ಟಿಹೋಳಿ,ರಾಜ್ಯ ಸೇವಾದಳದ ಕಾರ್ಯದರ್ಶಿ ಪ್ರಕಾಶ ದೇಶಪಾಂಡೆ, ಡಾ, ಎಸ್ ಕೆ ಮಕಾನದಾರ, ಸಂಕೇಶ್ವರ ಮಹಿಳಾ ಬ್ಲಾಕ್ ಅದ್ಯಕ್ಷೆ ನಮೃತಾ ವೈರಾಗಿ, ಕಾಂಗ್ರೆಸ್ ಅಲ್ಪ ಸಂಖ್ಯಾತರ ಅದ್ಯಕ್ಷ ಶಾನೂಲ ತಹಸಿಲ್ದಾರ,ದೀಲಿಪ ಹೊಸಮನಿ,ಸದಾ ಕರೆಪ್ಪಗೋಳ,ಕೆಂಪಣ್ಣಾ ಶಿರಹಟ್ಟಿ,ಉದಯ ಹುಕ್ಕೇರಿ, ಕಿರಣ ಕರೋಶಿ, ಪಕ್ಷದ ಕಾರ್ಯಕರ್ತರು,ಹಿರಿಯ ನಾಯಕರು,ಪುರಸಭೆ,ತಾಲೂಕ ಪಂಚಾಯತ ಸದಸ್ಯರು ಉಪಸ್ಥಿತರಿದ್ದರು.
ಸಂಕೇಶ್ವರ ಪಿ ಎಸ್ ಆಯ್ ಗಣಪತಿ ಕೊಂಗನೊಳಿ ಯವರ ನೆತೃತ್ವದಲ್ಲಿ ಸೂಕ್ತ ಬಂದೋಬಸ್ತ ಮಾಡಲಾಗಿತ್ತು.

Shree Panjurlli Fine Dine ADD

- Advertisement -

Leave A Reply

Your email address will not be published.