The news is by your side.

ಮಿಸ್ಟರ್ ಎಂದು ಸಂಬೋಧಿಸಿದರೆ ಅದು ಧಮ್ಕಿ ಆಗುತ್ತದೆಯೇ – ಸತೀಶ್

 

ಬೆಳಗಾವಿ : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು ಕಮಿಷನರ್ ಗೆ ಮಿಸ್ಟರ್ ಎಂದು ಸಂಬೋಧಿಸಿದರೆ ಅದು ಧಮ್ಕಿ ಆಗುತ್ತದೆಯೇ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಪ್ರಶ್ನಿಸಿದರು.

ಕಾಂಗ್ರೆಸ್ ಭವನದಲ್ಲಿ ಅವರಿಂದು ಮಾಧ್ಯಮದವರೊಂದಿಗೆ ಮಾತನಾಡಿದರು.

ಕೆಜಿ ಮತ್ತು ಡಿಜೆ ಹಳ್ಳಿಯ ಗಲಭೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ಒಂದು ಸಮಿತಿ ರಚನೆ ಮಾಡಲಾಗಿದೆ. ಸತ್ಯಾಂಶದ ವರದಿಯನ್ನು ಸರಕಾರಕ್ಕೆ ಸಲ್ಲಿಸಲಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಬೆಂಗಳೂರು ಕಮಿಷನರ್ ಗೆ ಮಿಸ್ಟರ್ ಎಂದಿದ್ದಾರೆ. ಅದನ್ನು ಬಿಜೆಪಿಯವರು ಧಮ್ಕಿ ಹಾಕುತ್ತಿದ್ದಾರೆ ಎನ್ನುವುದು ಸರಿಯಲ್ಲ. ವಿನಾಕಾರಣ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಗೂಬೆ ಕುರಿಸುವುದು ಸರಿಯಲ್ಲ . ಇಂಥ ಘಟನೆಗಳು ಪುನರಾವರ್ತನೆ ಆಗದಂತೆ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸಿದರು.

ಗಲಭೆಯಾದರೆ ನಿಯಂತ್ರಣ ಮಾಡುವುದು ಸರಕಾರದ ಜವಾಬ್ದಾರಿ ನಮ್ಮಲ್ಲಿ ಬಣಗಳಿರಬಹುದು. ಆದರೆ ಸರಕಾರದ ಗೃಹ ಸಚಿವರು ಇಂಥ ಹೇಳಿಕೆ ನೀಡುವುದು ಸರಿಯಲ್ಲ. ಸರಕಾರ ಜವಾಬ್ದಾರಿ ಅರಿತು ಕೆಲಸ ಮಾಡಬೇಕೆಂದು ಬಿಜೆಪಿಗೆ ತಿರುಗೇಟು ನೀಡಿದರು.

ಕಂದಾಯ ಸಚಿವರು ಪ್ರವಾಹದ ಸಂದರ್ಭದಲ್ಲಿಯೂ ಬರಲಿಲ್ಲ. ಈಗಲೂ ಬರಲಿಲ್ಲ. ಬೆಳಗಾವಿಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ. ಬಾಗಲಕೋಟ, ವಿಜಯಪುರ ಜಿಲ್ಲೆಯೂ ಹಾನಿಯಾಗಿದೆ. ಬೆಳಗಾವಿಯಲ್ಲಿ ನಾಲ್ಕು ಸಚಿವರಿದ್ದಾರೆ. ಅವರು ಕೇವಲ ತಮ್ಮ ತಾಲೂಕಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರವಾಹ ಹಾಗೂ ಕೋವಿಡ್ -19ನಲ್ಲಿ ಕೇಂದ್ರ ಸರಕಾರ ಸರಿಯಾಗಿ ಅನುದಾನ ನೀಡುತ್ತಿಲ್ಲ ಎಂದು ಮೊದಲಿನಿಂದಲೂ ಆರೋಪ‌ ಮಾಡಿಕೊಂಡು ಬರಲಾಗಿದೆ. ಮೋದಿಯವರಿಗೆ ಕರ್ನಾಟಕದ ಮೇಲೆ ಪ್ರೀತಿ ಇಲ್ಲ ಎಂದು ಮತ್ತೊಮ್ಮೆ ಪುನರುಚ್ಚಿದರು.

ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

- Advertisement -

Leave A Reply

Your email address will not be published.