The news is by your side.

ಮೊಬೈಲ್ ನಲ್ಲಿ ಬಹುಮಾದ ಆಸೆ ತೋರಿಸಿ ವಂಚನೆ

 

ಬೆಳಗಾವಿ:: ಮೊಬೈಲ್ ನಲ್ಲಿ ಅಪರಿಚಿತ ವ್ಯಕ್ತಿಯ ಮಾತನ್ನು ನಂಬಿ ಬಹುಮಾನ ಪಡೆಯುವ ಆಸೆಯಿಂದ ಮಹಿಳೆ ಯೊಬ್ಬರು ಯಾಮಾರಿದ್ದು, ಈಗ ಕ್ರೈಂ ಬ್ರ್ಯಾಂಚ್ ಪೊಲೀಸರಿಗೆ ದೂರು ನೀಡಿದ್ದಾರೆ.

ನಿಮ್ಮ ಮೊಬೈಲ್‍ಗೆ ಬಹುಮಾನ ಬಂದಿದೆ. ಅದನ್ನು ಪಡೆಯಲು ನೀವು ಟ್ಯಾಕ್ಸ್ ಕಟ್ಟಬೇಕು ಎಂದು ಹೇಳಿ ರೋಹಿತ್ ಜೈನ್ ಎಂಬ ಹೆಸರಿನಲ್ಲಿ ಫೋಟೋ ಅಪ್‍ಲೋಡ್ ಮಾಡಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ಕಾಕತಿ ವೇಸ್ ನಿವಾಸಿಯಾಗಿರುವ ಅಲ್ಫಿಯಾ ಅಂಜುಮ್ ಮನಿಯಾರ್ ಎಂಬುವವರಿಂದ ಹಂತ ಹಂತವಾಗಿ ಬರೋಬ್ಬರಿ 7500 ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದಾನೆ. 

ಬೆಳಗಾವಿ ಕ್ರೈಂ ಬ್ರ್ಯಾಂಚ್ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.