The news is by your side.

ಗಾನ ಗಾರುಡಿಗ S P ಬಾಲಸುಬ್ರಮಣಿಯಂ ಚಿಕಿತ್ಸೆಗೆ ವಿದೇಶಿ ವೈದ್ಯರು

 

ಚೆನ್ನೈ : ದೇಶದ ಖ್ಯಾತ ಗಾನ ಸಾಮ್ರಾಟ ಎಸ್ ಪಿ ಬಾಲಸುಬ್ರಮಣಿಯಂ ಅವರಿಗೆ ಅಂತರರಾಷ್ಟ್ರೀಯ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. ನುರಿತ ವೈದ್ಯರ ತಂಡ ನಿನ್ನೆ ಗುರುವಾರ ಚೆನ್ನ್ಸಿಗೆ ಆಗಮಿಸಿದೆ.

ಕೊರೊನಾ ಸೋಂಕಿನಿಂದ ಬಳಲುತ್ತಿರುವ ಬಾಲಸುಬ್ರಹ್ಮಣ್ಯಂ ಕಳೆದ ದಿ 5 ರಿಂದ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಕಳೆದ ಕೆಲ ದಿನಗಳಿಂದ ಅವರ ಆರೋಗ್ಯ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆ ಅವಶ್ಯವಿರುವದರಿಂದ ವಿದೇಶದಿಂದ ತಜ್ನ ವೈದ್ಯರ ತಂಡ ನಿನ್ನೆ ಗುರುವಾರ ಆಗಮಿಸಿ ಚಿಕಿತ್ಸೆ ಆರಂಭಿಸಿದೆ.

ಈ ಕುರಿತು ಟ್ವಿಟ್ ಮೂಲಕ ಹೇಳಿಕೆ ನೀಡಿರುವ ಅವರ ಪುತ್ರ “ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ” ಎಂದು ತಿಳಿಸಿ ನಿಮ್ಮೆಲರ ಹಾರೈಕೆಯಿರಲಿ ಎಂದು ವಿನಂತಿಸಿಕೊಂಡ್ಡಿದ್ದರು.

50000 ಕ್ಕೂ ಹೆಚ್ಚು, ಭಾರತದ ಬಹುತೇಕ ಎಲ್ಲ ಭಾಷೆಗಳಲ್ಲೂ ಹಾಡಿರುವ ಗಾನ ಸಾಮ್ರಾಟ ಬಾಲಸುಬ್ರಮಣಿಯಂ ಬೇಗ ಗುಣಮುಖರಾಗಿ ಮತ್ತೆ ಹಾಡುವಂತಾಗಲಿ ಎಂಬುದೇ ಕೋಟ್ಯಂತರ ಅಭಿಮಾನಿಗಳ ಹಾರೈಕೆ.

- Advertisement -

Leave A Reply

Your email address will not be published.