ಯರಗಟ್ಟಿ: ರಾಜ್ಯ ಹೆದ್ದಾರಿಯ ಬೂದಿಗೊಪ್ಪ ಗ್ರಾಮದ ಸಮೀಪ ಶುಕ್ರವಾರ ರಾತ್ರಿ ಕಾರ್ ಹಾಗೂ ಮಹೇಂದ್ರಾ ಫಿಕಅಪ್ ವಾಹನದ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದು ಒಂಬತ್ತು ಜನ ಗಾಯಗೊಂಡಿದ್ದಾರೆ.
ಬಾಗಲಕೋಟೆ ಜಿಲ್ಲೆ ಬದಾಮಿ ತಾಲೂಕಿನ ಉಗಳವಾಡ ಗ್ರಾಮದ ತಿಮ್ಮಣ್ಣಾ ನಾಯಕ ಹಾಗೂ ಇನ್ನಿಬ್ಬರು ಮೃತರಪಟ್ಟಿದ್ದಾನೆ. ಇವರು
ಕಾರಿನಲ್ಲಿ ಪ್ರಯಾಣಿಸುತ್ತಿದ್ದರು.
ಮಹೇಂದ್ರಾ ಫಿಕಅಪ್ ವಾಹನ ಯರಝರ್ವಿ ಗ್ರಾಮದ ವ್ಯಕ್ತಿಗೆ ಸೇರಿದ್ದು ಎಂದು ತಿಳಿದುಬಂದಿದೆ. ಮಹೇಂದ್ರಾ ಫಿಕಅಪ್ ವಾಹನದಲ್ಲಿ ಪ್ರಯಾಣಿಸುತ್ತಿದ್ದರು ಒಂಬತ್ತು ಜನರು ಗಾಯಗೊಂಡಿದ್ದಾರೆ. ಘಟನಾಸ್ಥಳಕ್ಕೆ ಬೇಟಿ ನೀಡಿದ ಮುರಗೋಡ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ಗಂಗೋಳ್ಳಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
