The news is by your side.

ಅಂಕಲಿಯಲ್ಲಿ ಆಧುನಿಕ ಕೊರೊನಾ‌ ಆಸ್ಪತ್ರೆ

ಚಿಕ್ಕೋಡಿ: ಅಂಕಲಿ ಗ್ರಾಮದಲ್ಲಿ ಅತ್ಯಾಧುನಿಕ 30 ಹಾಸಿಗೆಯ ಕೋವಿಡ್ ಆಸ್ಪತ್ರೆಯ ಉದ್ಘಾಟನೆ ಆ.24 ರಂದು ಬೆಳಗ್ಗೆ ನೆರವೇರಲಿದೆ.
ಈ ಕೋವಿಡ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯಗಳು, ನುರಿತ ತಜ್ಞ ವೈದ್ಯರು ಹಾಗೂ ಸಿಬ್ಬಂದಿಯ ನೇಮಕದೊಂದಿಗೆಯೇ ಆರಂಭಿಸಲಾಗುತ್ತಿದೆ. ಬೆಂಗಳೂರು, ಬೆಳಗಾವಿ, ಮುಂಬೈನಂತಹ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ದೊರೆಯುವಂತಹ ಅತ್ಯಾಧುನಿಕ ಸೌಲಭ್ಯಗಳುಳ್ಳ ವೈದ್ಯಕೀಯ ಚಿಕಿತ್ಸೆ ಅಂಕಲಿಯಂತಹ ಗ್ರಾಮೀಣ ಪ್ರದೇಶದಲ್ಲಿ ದೊರೆಯುವಂತೆ ಮಾಡಲಾಗುತ್ತಿದೆ.
ತಾಲೂಕಿನ ಅಂಕಲಿ ಗೋಮಟೇಶ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯ ಆವರಣದಲ್ಲಿ ಖಾಸಗಿ ಹಾಗೂ ಸರ್ಕಾರಿ ವೈದ್ಯರ ಸಹಕಾರದೊಂದಿಗೆ ಕೋವಿಡ್ ಆಸ್ಪತ್ರೆ ಆರಂಭಿಸಲಾಗುತ್ತಿದೆ ಎಂದು ಗೋಮಟೇಶ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎನ್.ಎ.ಮಗದುಮ್ಮ ತಿಳಿಸಿದರು.

ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಗೋಮಟೇಶ್ ಶಿಕ್ಷಣ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಾಜಿ ಗ್ರಾ.ಪಂ. ಉಪಾಧ್ಯಕ್ಷ ತುಕಾರಾಮ ಪಾಟೀಲ ಮಾತನಾಡಿ, ಈ ಭಾಗದ ಜನರಿಗೆ ಉತ್ತಮ ಮತ್ತು ಸಮಯಕ್ಕೆ ಸರಿಯಾಗಿ ವೈದ್ಯಕೀಯ ಸೇವೆ ನೀಡುವ ಉದ್ದೇಶದಿಂದ ಅಂಕಲಿಯಂತಹ ಒಂದು ಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಕೋವಿಡ್ ಕೇರ್ ಆಸ್ಪತ್ರೆಯನ್ನು ಆರಂಭಿಸುತ್ತಿರುವ ಡಾ.ಎನ್.ಎ.ಮಗದುಮ್ಮ ಮತ್ತು ಅವರ ತಂಡದವರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.

ಅಂಕಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ. ಮಹೇಶ ಕುಂಬಾರ, ಡಾ. ಶಿವಾನಂದ ಪಾಟೀಲ, ಪ್ರಾಚಾರ್ಯರಾದ ಬಸವಣ್ಣಿ ಸಂಗಪ್ಪಗೋಳ, ಎನ್.ಎಸ್.ನಿಡಗುಂದೆ, ಯಾಕುಬ ತಾಂಬಟ, ಪ್ರವೀಣ ಪಾಟೀಲ, ಸತೀಶ ಜಾಧವ ಮುಂತಾದವರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.