The news is by your side.

ಕಂಗ್ರಾಳಿ ಬಿ ಕೆ ಗ್ರಾಮದ ಮರಗಾಯಿ ಮತ್ತು ಸಂತಾಜೀ ಗಲ್ಲಿಗಳಲ್ಲಿ ಸಿ ಸಿ ರಸ್ತೆಯ ಕಾಮಗಾರಿಗಳಿಗೆ ಚಾಲನೆ

ಬೆಳಗಾವಿ: ಗ್ರಾಮೀಣ
ರೂರಲ್ ಅರ್ಬನ್ ಮಿಶನ್ ಯೋಜನೆಯಡಿಯಲ್ಲಿ ಕಂಗ್ರಾಳಿ ಬಿ ಕೆ ಗ್ರಾಮದ ಮರಗಾಯಿ ಮತ್ತು ಸಂತಾಜೀ ಗಲ್ಲಿಗಳಲ್ಲಿ ಸಿ ಸಿ ರಸ್ತೆಯ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮಿ ಹೆಬ್ಬಾಳ ಕರ ಚಾಲನೆಯನ್ನು ನೀಡಿದರು.

ಒಂದು ಕೋಟಿ ಮೂವತ್ತೆಂಟು ಲಕ್ಷ (1,38,00,000/-) ರೂ,ಗಳ ವೆಚ್ಚದಲ್ಲಿ ರಸ್ತೆಯ ಕಾಮಗಾರಿ ಆರಂಭಗೊಳ್ಳಲಿದ್ದು ಈ ರಸ್ತೆಯು ಸುಮಾರು ಮೂರುವರೆ (3.50kms) ಕಿಮೀಗಳಷ್ಟು ಉದ್ದವನ್ನು ಹಾಗೂ ಸರಾಸರಿ 3.75 ರಷ್ಟು ಅಗಲದೊಂದಿಗೆ ಒಟ್ಟು ಮೂವತೈದು ಗಲ್ಲಿಗಳನ್ನು ಒಳಗೊಂಡಿದೆ. ರಸ್ತೆಯ ಕಾಮಗಾರಿಗಳು ಉತ್ತಮ ಗುಣಮಟ್ಟದಿಂದ ಕೂಡಿರಬೇಕು ಹಾಗೂ ನಿಗದಿತ ಸಮಯದಲ್ಲಿ ಮುಕ್ತಾಗೊಳ್ಳಬೇಕೆಂದು ಗುತ್ತಿಗೆದಾರರಿಗೆ ಸೂಚನೆ ನೀಡಿರುವುದಾಗಿ ಅವರು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಗ್ರಾಮಸ್ಥರು, ಬೆಳಗಾವಿ ಸಂಸದ ಸುರೇಶ ಅಂಗಡಿ, ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಾ ಪಾಟೀಲ, ಯುವರಾಜಣ್ಣಾ ಕದಂ, ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಕಟಾಂಬಳೆ, ಪಿಡಬ್ಲೂಡಿ ಇಂಜಿನಿಯರ್ ಖಾನಾಪೂರೆ, ಅನಿಲ ಪಾವಸೆ, ಜಯರಾಂ ಪಾಟೀಲ, ಉಮೇಶ ಪಾಟೀಲ, ಪಕ್ಷದ ಕಾರ್ಯಕರ್ತರು, ಮುಖಂಡರು, ಗುತ್ತಿಗೆದಾರರು ಹಾಗೂ ಮುಂತಾದವರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.