The news is by your side.

ನನ್ನ ಅಸ್ತಿತ್ವಕ್ಕೆ ಕುಟುಂಬವೇ ಭದ್ರ ಬುನಾದಿ “- ಶಶಿಕಲಾ ಜೊಲ್ಲೆ

 

ಚಿಕ್ಕೋಡಿ::ಮಾನವ ಸಂಘಜೀವಿ. ಅದರಲ್ಲೂ ಕುಟುಂಬದ ಮಹತ್ವ ಹೆಚ್ಚೇ ಇರುತ್ತದೆ. ಯಾರದ್ದೇ ಸೋಲು-ಗೆಲುವುಗಳಲ್ಲೂ ಕುಟುಂಬದ ಪಾತ್ರ ಬಲು ಮುಖ್ಯವಂತೆ ಎಂದು ರಾಜ್ಯದಲ್ಲಿ ಮಂತ್ರಿಯೂ ಆಗಿರುವ ಶಶಿಕಲಾ ಜೊಲ್ಲೆ ಹೇಳಿದ್ದಾರೆ.

ಹಾಗೆಯೇ ನನ್ನ ಬದುಕಿನ ಪ್ರತಿಕ್ಷಣವೂ ಜತೆಯಾಗೆ, ಗೆಲುವಿನಲ್ಲಿ ಸಂಭ್ರಮಿಸುತ್ತಾ, ಸೋಲಿನಲ್ಲಿ ಸಂತೈಸುತ್ತಾ, ಪರಿಸ್ಥಿತಿ ಒಡ್ಡಿದ ಪರೀಕ್ಷೆಯಲ್ಲಿ ಕೈಹಿಡಿದು ನಿಂತ ಈ ಕುಟುಂಬದೊಡನೆ ಕಾಲ ಕಳೆಯುವುದೇ ಒಂದು ಭಾಗ್ಯ! ಎಂದು ಅವರು ಜೀವನದ ಮೌಲ್ಯವನ್ನು ಹೇಳಿದ್ದಾರೆ.

ಹಬ್ಬವೆಂದರೆ, ಕುಟುಂಬದೊಂದಿಗೆ ಒಂದಾಗಿ ಆಚರಿಸುವ ಪವಿತ್ರ ಮಹೋತ್ಸವ. ಹೀಗೆ ಗಣೇಶ ಹಬ್ಬದ ಪೂಜೆ-ಪುನಸ್ಕಾರಗಳು ಮುಗಿದ ಬಳಿಕೆ ಮಾತೃರೂಪಿ ಅತ್ತೆ, ಪ್ರೀತಿಯ ಪತಿ ಹಾಗೂ ನನ್ನೆರಡು ಮುದ್ದು ಮಕ್ಕಳೊಂದಿಗೆ ಪ್ರೀತಿ- ಬಾಂಧವ್ಯಗಳನ್ನು ಹಂಚುತ್ತಾ ಸಂಭ್ರಮಿಸಿದ ಪ್ರತಿ ನಿಮಿಷವೂ ಅಮೂಲ್ಯ! ಎಂಬುದು ಕೌಟುಂಬಿಕ ಮೌಲ್ಯ ಕ್ಕೆ ಇಂದಿನ ದಿಜ ತಾವು ನೀಡುವ ಮಹತ್ವ ವಿವರಿಸಿದ್ದಾರೆ.

- Advertisement -

Leave A Reply

Your email address will not be published.