The news is by your side.

ಇನ್ನೆರಡು ವರ್ಷದಲ್ಲಿ ಕೊರೊನಾ ಖತ್ಮ

ಜಿನಿವಾ: ಈಗ ಒಂದು ವೇಳೆ, ಲಸಿಕೆ ಪತ್ತೆಹಚ್ಚಲು ಜಗತ್ತು ಒಟ್ಟಾಗಿ ಯಶಸ್ವಿಯಾದರೆ, ಕೊರೊನಾ ಸೋಂಕು ಪಿಡುಗು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಕೊನೆಗೊಳ್ಳಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್‌ ಅದಾನೊಮ್‌ ಗೆಬ್ರೆಯೆಸಸ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

1918ರಲ್ಲಿ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಎರಡು ವರ್ಷಗಳ ಕಾಲ ಜಗತ್ತನ್ನು ಕಾಡಿತ್ತು.
102 ವರ್ಷಗಳ ಹಿಂದೆ ಕಾಣಿಸಿಕೊಂಡಿದ್ದ ಸ್ಪ್ಯಾನಿಷ್‌ ಜ್ವರ ಅಂತ್ಯವಾಗಲು 2 ವರ್ಷಗಳೇ ಬೇಕಾದವು. ಸದ್ಯದ ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ, ವಿಶ್ವದೊಂದಿಗೆ ಹೆಚ್ಚು ಸಂಪರ್ಕ ಇರುವುದರಿಂದ ಕೊರೊನಾ ಸೋಂಕು ತ್ವರಿತವಾಗಿ ವ್ಯಾಪಿಸುತ್ತಿದೆ.

ನಾವೆಲ್ಲರೂ ಪರಸ್ಪರ ಬೆಸೆದುಕೊಂಡಿರುವ ಕಾರಣಕ್ಕೆ ಅದು ಹೆಚ್ಚು ಹರಡಿದೆ,’ ಎಂದು ಅವರು ಜಿನಿವಾದಲ್ಲಿ ಹೇಳಿದ್ದಾರೆ. ಜತೆಗೆ ಕೊರೊನಾ ಸೋಂಕನ್ನು ತಡೆಯುವ ತಂತ್ರಜ್ಞಾನ ಮತ್ತು ಜ್ಞಾನ ನಮ್ಮಲ್ಲಿದ್ದು, ಜಾಗತೀಕರಣ, ಜಾಗತಿಕ ಸಂಪರ್ಕಗಳು ನಮಗೆ ವರದಾನವಾಗಿದೆ.

ಹೀಗಾಗಿ ನಾವು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ವೈರಸ್‌ ಅನ್ನು ಅಂತ್ಯಗೊಳಿಸಬಹುದು,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಗತ್ತು ಈಗ ಒಗ್ಗಟ್ಟಾಗಬೇಕು ಲಭ್ಯ ಇರುವ ಪರಿಕರಗಳನ್ನು ಸಮರ್ಥವಾಗಿ ಬಳಸಿಕೊಂಡು, ಪರಿಣಾಮಕಾರಿ ಲಸಿಕೆಗಳನ್ನು ಹೊರತರುವಲ್ಲಿ ನಾವು ಕಾರ್ಯಾಚರಿಸುವಲ್ಲಿ ಒಂದಾಗುವ ಅಗತ್ಯವಿದೆ,’ ಎಂದು ಅವರು ಸಂದೇಶ ನೀಡಿದ್ದಾರೆ.

- Advertisement -

Leave A Reply

Your email address will not be published.