The news is by your side.

ಸಾವಿನಲ್ಲಿ ಒಂದಾದ ದಂಪತಿ

ಮಹಾಲಿಂಗಪುರ; ಪತಿಯ ಅನಾರೋಗ್ಯ ಮಿತಿಮೀರಿದ ಕಾರಣ ಸೇವೆಯಲ್ಲಿ ತೊಡಗಿದ ಪತ್ನಿ ಆಘಾತಕ್ಕೆ ಒಳಗಾಗಿ ಸಾವನಪ್ಪಿದ ಕೆಲವೇ ಗಂಟೆಗಳಲ್ಲಿ ವಿಷಯ ತಿಳಿದ ಪತಿಯೂ ಪ್ರಾಣ ಕಳೆದುಕೊಂಡು ಸಾವಿನಲ್ಲೂ ಒಂದಾದ ಘಟನೆ ಜರುಗಿದೆ.

ಶನಿವಾರದ ಈ ಘಟನೆಯಲ್ಲಿ ಮುಧೋಳ ತಾಲೂಕಿನ ಬೆಳಗಲಿ ಪಟ್ಟಣದ ಪ್ರಗತಿಪರ ರೈತ ಗೋವಿಂದಗೌಡ ಶಿವಪ್ಪ ಒಂಟಗೋಡಿ(48) ಹಾಗೂ ಪುಷ್ಪಲತಾ. ಗೋವಿಂದಗೌಡ. ಒಂಟಗೋಡಿ(42) ದಂಪತಿ ಮೃತ ದುರ್ದೈವಿಗಳಾಗಿದ್ದಾರೆ.

ಇವರಿಗೆ ಪುತ್ರ,ಪುತ್ರಿ, ಸಹೋದರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಇವರ ಅಗಲಿಕೆಗೆ ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ, ಧರೆಪ್ಪ ಸಾಂಗ್ಲಿಕರ್, ಪಿ.ಬಿ.ಪೂಜಾರಿ, ಸಿದ್ದಪ್ಪ ಕೊನ್ನೂರ್, ಚಿಕ್ಕಪ್ಪ ನಾಯಕ್, ಈರಪ್ಪ ಕಿತ್ತೂರ್, ಎಚ.ಎ. ಕಡಪಟ್ಟಿ,ಸಂಗನಗೌಡ ಪಾಟೀಲ್, ಮುತ್ತಪ್ಪ ಸಿದ್ದಾಪುರ, ಅಶೋಕ ಸಿದ್ದಾಪುರ, ರಂಗಪ್ಪ ಒಂಟಗೋಡಿ ಹಾಗೂ ಊರಿನ ಗುರು ಹಿರಿಯರು ಸಂತಾಪ ಸೂಚಿಸಿದ್ದಾರೆ.

Shree Panjurlli Fine Dine ADD

- Advertisement -

Leave A Reply

Your email address will not be published.