The news is by your side.

ಪ್ರತ್ಯೇಕ ವಾರ್ಡ್ ಮತ್ತು ಪ್ರದೇಶಗಳಲ್ಲಿ ದಿ. 28 ರಂದು ಗಣೇಶ ವಿಸರ್ಜನೆಗೆ ಪ್ರತ್ಯೇಕ ಟ್ಯಾಂಕ್

ಬೆಳಗಾವಿ: ಆಗಸ್ಟ್ 28ರಂದು ಪ್ರತ್ಯೇಕ ವಾರ್ಡ್ ಮತ್ತು ಪ್ರದೇಶಗಳಲ್ಲಿ ನಿಗದಿತ ಸಮಯಗಳಲ್ಲಿ ಗಣೇಶ ವಿಸರ್ಜನೆ ಟ್ಯಾಂಕ್ ಆಗಮಿಸಲಿದ್ದು, ಸಾರ್ವಜನಿಕರು ಗಣೇಶ ಮೂರ್ತಿಗಳನ್ನು ವಿಸರ್ಜಿಸಬೇಕು ಎಂದು ಅಧಿಕೃತವಾಗಿ ತಿಳಿಸಲಾಗಿದೆ.

ಬೆಳಗಾವಿಯಲ್ಲಿ ಈ ಬಾರಿಯ ಗಣೇಶೋತ್ಸವದ ಮೇಲೆ ಕೊರೋನಾ ನೆರಳು ಬಿದ್ದಿದೆ. ಸರ್ಕಾರದ ಮಾರ್ಗ ಸೂಚಿಯಂತೆ 4 ಅಡಿ ಮಿತಿಯಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶೋತ್ಸವ ಮಂಡಳಗಳು, ವಿಸರ್ಜನೆಯನ್ನೂ ಸಹ ಸರ್ಕಾರದ ಮಾರ್ಗ ಸೂಚಿಯಂತೆ ಕೈಗೊಳ್ಳಬೇಕು ಎಂದು ಮಹಾನಗರ ಪಾಲಿಕೆ ಸೂಚನೆ ನೀಡಿದೆ. ಈ ಕುರಿತು ಪ್ರತ್ಯೇಕ ವಾರ್ಡ್, ಪ್ರದೇಶಗಳಿಗೆ ಆಗಸ್ಟ್ 28ರಂದು ಗಣೇಶ ವಿಸರ್ಜನೆ ಮೊಬೈಲ್ ಟ್ಯಾಂಕ್ ಆಗಮಿಸಲಿದ್ದು, ಎಲ್ಲರೂ ಕಡ್ಡಾಯವಾಗಿ ಅದೇ ಟ್ಯಾಂಕ್‍ನಲ್ಲಿ ಗಣೇಶ ವಿಸರ್ಜನೆ ಮಾಡಬೇಕು ಎಂದು ಆದೇಶ ನೀಡಲಾಗಿದೆ.

ಬೆಳಗಾವಿ ನಗರದ ವಿವಿಧೆಡೆ ಗಣೇಶ ಮೂರ್ತಿಗಳ ವಿಸರ್ಜನೆಗೆ ಮಹಾನಗರ ಪಾಲಿಕೆಯ ವತಿಯಿಂದ ವ್ಯವಸ್ಥೆ ಮಾಡಲಾಗಿದೆ ಎಂದು ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್. ತಿಳಿಸಿದ್ದಾರೆ.

ಆಗಸ್ಟ್ 28ರಂದು ಮಧ್ಯಾಹ್ನ 3 ಗಂಟೆಯಿಂದ 4 ಗಂಟೆಯವರೆಗೆ ಬೆಳಗಾವಿ ವಿಶ್ವೇಶ್ವರಯ್ಯ ನಗರ ಬಸ್ ಸ್ಟಾಫ್ ಹತ್ತಿರ, ಭಾಗ್ಯನಗರ 8ನೇ ಕ್ರಾಸ್ ಬಳಿ, 4.30ರಿಂದ 5.30ರವರೆಗೆ ಟಿಳಕ್ ಚೌಕ್, ರಾಮಲಿಂಗಖಿಂಡ್ ಗಲ್ಲಿ, 6ರಿಂದ 7ರವರೆಗೆ ಮಹಾಂತೇಶ ನಗರ ಸ್ಟೇಟ್ ಬ್ಯಾಂಕ್ ಮೈಸೂರು ಬಳಿ, ಖಾಸಬಾಗದ ಹಳೆ ಪಿಬಿ ರಸ್ತೆ ದಾಕೋಜಿ ರಸ್ತೆ ಹತ್ತಿರ, 7.30ರಿಂದ 8.30ರವರೆಗೆ ಬಾಕ್ಸೈಟ್ ರಸ್ತೆಯ ಡಾ.ನಾಗಲೋತಿಮಠ ಮನೆ ಹತ್ತಿರ, ಖಾಸಭಾಗ ಬಸವೇಶ್ವರ ವೃತ್ತದ ಬಳಿ, ರಾತ್ರಿ 9 ರಿಂದ 10 ಗಂಟೆಯವರೆಗೆ ಹಿಂದವಾಡಿ ಸುಭಾಷ್ ಮಾರ್ಕೇಟ್ ಹತ್ತಿರ, ಹನುಮಾನನಗರ ವೃತ್ತದ ಬಳಿ ಗಣೇಶ ವಿಸರ್ಜನೆ ಟ್ಯಾಂಕರ್ ನಿಲುಗಡೆಯಾಗಲಿದೆ.

ಇನ್ನು ಅಂದು ಮಧ್ಯಾಹ್ನ 3ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಂಟಮೂರಿ ಸಾಯಿಬಾಬಾ ದೇವಸ್ಥಾನದ ಹತ್ತಿರ, ಶಾಹುನಗರ ಕೊನೆ ಬಸ್ ನಿಲ್ದಾಣದ ಹತ್ತಿರ, ಅನಗೋಳ ಹರಿಮಂದಿರದ ಹತ್ತಿರ, ಕಣಬರಗಿ ದೇವಸ್ಥಾನಕ್ಕೆ ಹೋಗುವ ರಸ್ತೆ, ದೇವರಾಜ ಅರಸ್ ಕಾಲೋನಿ ಜಲಾಶಯದ ಹತ್ತಿರ, ಹಿಂಡಲಗಾ ಕೊಳಚೆ ಅಭಿವೃದ್ಧಿ ಮಂಡಳಿ ಹತ್ತಿರ, ಸಹ್ಯಾದ್ರಿ ನಗರ ಟ್ಯಾಂಕ್ ಹತ್ತಿರ, ಬೆಳಗಾವಿ ಕಿಲ್ಲಾ ಪ್ರದೇಶ, ಕ್ಯಾಂಪ್ ಪೊಲೀಸ್ ಠಾಣೆ, ಲಕ್ಷ್ಮೀ ಟೇಕಡಿ ಲಕ್ಷ್ಮೀ ದೇವಸ್ಥಾನದ ಹತ್ತಿರ, ಹಳೇ ಪೋಸ್ಟ್ ಆಫೀಸ್ ಹತ್ತಿರ, ರಾಮತೀರ್ಥ ನಗರ ಬಡಾವಣೆ ಶಿವಾಲಯದ ಹತ್ತಿರ, ಕುಮಾರಸ್ವಾಮಿ ಲೇಔಟ್, ಆಟೋ ನಗರ ಬಳಿ ವಿಸರ್ಜನೆ ಟ್ಯಾಂಕರ್ ನಿಲುಗಡೆಯಾಗಲಿದೆ ಎಂದು ಪಾಲಿಕೆಯ ಆಯುಕ್ತ ಜಗದೀಶ್ ಕೆ.ಎಚ್. ಮಾಹಿತಿ ನೀಡಿದ್ದಾರೆ.

ಕೊರೋನಾ ಸೋಂಕು ತಡೆ ಹಿನ್ನೆಲೆಯಲ್ಲಿ ಈ ಬಾರಿಯ ಗಣೇಶೋತ್ಸವವನ್ನು ಬೆಳಗಾವಿಯಲಿ ಸರ್ಕಾರದ ಮಾರ್ಗಸೂಚಿಯಂತೆ ಸರಳ, ಸಂಕ್ಷಿಪ್ತವಾಗಿ ಆಚರಿಸಲಾಗುತ್ತಿದೆ. 11 ದಿನಗಳ ನಂತರ ಸರ್ಕಾರದ ಮಾರ್ಗಸೂಚಿ ಅನುಸರಿಸಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು ಬೆಳಗಾವಿ ಮಹಾನಗರ ಪಾಲಿಕೆ ಆದೇಶ ನೀಡಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.