The news is by your side.

ಅವರಾದಿ – ಹಂಪಿಹೊಳಿ ಸಂತ್ರಸ್ತರ ಅಳಲು ಕೇಳೋರಿಲ್ಲ

ರಾಮದುರ್ಗ: ಖಾನಾಪುರ ತಾಲೂಕಿನ ಅರಣ್ಯ ಪ್ರದೇಶದಲ್ಲಿ ಭಾರಿ ಮಳೆ ಆದ್ರೆ ಸಾಕು ಮಲಪ್ರಭಾ ನದಿ ತುಂಬಿ ಹರಿದು ನದಿ ತೀರದ ಜನರಲ್ಲಿ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ. ರಾಮದುರ್ಗ ತಾಲೂಕಿನ ಹಂಪಿಹೊಳಿ ಮತ್ತು ಅವರಾದಿ ಗ್ರಾಮದ ಪ್ರವಾಹ ಪರಿಸ್ಥಿತಿ ಈ ಬಾರಿಯೂ ಮರುಕಳಿಸಿದೆ. ಅವರಾದಿ ಹಾಗೂ ಹಂಪಿಹೊಳಿ ಎರಡೂ ಗ್ರಾಮಗಳಲ್ಲಿ ನೂರಾರು ಮನೆಗಳು ಬಿದ್ದಿದ್ದವು.

ಆಗ ಸರ್ಕಾರ ಪರಿಹಾರ ಏನೋ ಘೋಷಣೆ ಮಾಡಿತ್ತು. ಆದ್ರೆ ಕಳೆದ ವರ್ಷದ ಪ್ರವಾಹ ಪರಿಹಾರ ಇನ್ನೂ ಇವರಿಗೆ ಬಂದು ಮುಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ ಸಂತ್ರಸ್ಥರು ರಾಮದುರ್ಗ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಸೂಕ್ತ ಪರಿಹಾರಕ್ಕಾಗಿ ಆಗ್ರಹಿಸಿ ಅಹೋರಾತ್ರಿ ಧರಣಿಗೆ ಮುಂದಾಗಿದ್ದಾರೆ.

2019ರಲ್ಲಿ ಉಂಟಾದ ಭೀಕರ ಜಲಪ್ರಳಯದಲ್ಲಿ ನಾವೆಲ್ಲರೂ ಮನೆ ಕಳೆದುಕೊಂಡಿದ್ದೇವೆ.

ಅದಲ್ಲದೆ ಈ ವರ್ಷ ಸುರಿದ ಮಳೆಯಿಂದಾಗಿ ಮತ್ತೆ ಗ್ರಾಮಕ್ಕೆ ನೀರು ನುಗ್ಗಿ ಹಾನಿ ಉಂಟಾಗಿದೆ. ನೆರೆ ಪರಿಹಾರಕ್ಕಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸುತ್ತಿದ್ದರೂ ಸಹ ಯಾವೊಬ್ಬ ಅಧಿಕಾರಿಯೂ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಮಹಿಳೆಯರು ಭಾಗಿಯಾಗಿದ್ದು. ದಯವಿಟ್ಟು ನಮಗೆ ಸಹಾಯ ಮಾಡ್ರಿ. ಪ್ರತಿ ವರ್ಷ ನಮಗೆ ಈ ಗೋಳು ತಪ್ಪಿದ್ದಲ್ಲ. ಮತ್ತೆ ನಮ್ಮ ಊರಿಗೆ ನೀರು ನುಗ್ಗಿದ್ದರಿಂದ ಶಾಲೆಗಳಲ್ಲಿ ನಮಗೆ ಗಂಜಿ ಕೇಂದ್ರ ತೆಗೆದಿದ್ದಾರೆ. ಮೊದಲೇ ರೋಗ ರುಜಿನಗಳು ಹೆಚ್ಚಾಗಿರುವ ಇಂತಹ ಸಮಯದಲ್ಲಿ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ನಾವು ಹ್ಯಾಂಗ ಇರುದ್ರಿ ಎಂದು ಮಹಿಳೆಯರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ.

- Advertisement -

Leave A Reply

Your email address will not be published.