ಬೆಳಗಾವಿ: ತಾಲೂಕು ಸೇರಿದಂತೆ ಸ್ಮಾರ್ಟ್ ಸಿಟಿ ಯಲ್ಲಿ ಇಂದು ಹೊಸದಾಗಿ 87 ಜನರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಅದೇ ರೀತಿ ಬೈಲಹೊಂಗಲ ಮತ್ತು ಚಿಕ್ಕೋಡಿ ತಾಲೂಕಿನಲ್ಲಿಯೂ ತಲಾ 39 ಪಾಸಿಟಿವ್ ಕೇಸ್ಗಳು ದಾಖಲಾಗಿವೆ.
ಇನ್ನು ಬೆಳಗಾವಿ ಜಿಲ್ಲೆಯ ಗೋಕಾಕ್-28, ರಾಯಬಾಗ-27, ಅಥಣಿ-20, ಸವದತ್ತಿ-18, ಹುಕ್ಕೇರಿ-18, ರಾಮದುರ್ಗ-12, ಖಾನಾಪುರ-7, ಬಾಗಲಕೋಟೆ ಮೂಲ-2, ಹುಬ್ಬಳ್ಳಿ ಮೂಲ-1 ಕೊರೊನಾ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
