The news is by your side.

ಕಾಂಗ್ರೆಸ್ ಉಳಿಸಲು, ಬೆಳೆಸಲು ಗಾಂಧಿ ಕುಟುಂಬದ ಕೊಡುಗೆ ದೊಡ್ಡದು- ಸತೀಶ್

ಬೆಳಗಾವಿ: ಎಐಸಿಸಿಯಲ್ಲಿ ಭುಗಿಲ್ಲೆದ್ದಿರುವ ನಾಯಕತ್ವ ವಿವಾದ ಕುರಿತಂತೆ ಪ್ರಶ್ನೆಗಳಿಗೆ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಂಗಳವಾರ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಉಳಿಸಲು, ಬೆಳೆಸಲು ಗಾಂಧಿ ಕುಟುಂಬದ ಕೊಡುಗೆ ದೊಡ್ಡದು. ಯಾವ ನಾಯಕರೂ ನಾಯಕತ್ವ ಬದಲಾವಣೆ ಬಗ್ಗೆ ಧ್ವನಿ ಎತ್ತಿಲ್ಲ. ಹಾಗಾಗಿ ಪಕ್ಷದಲ್ಲಿ ಗೊಂದಲಗಳು ಇಲ್ಲವೇ ಇಲ್ಲ. ಎಐಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರ ನೇಮಕಕ್ಕೆ ಇನ್ನೂ ಕಾಲಾವಕಾಶ ಇದೆ ಎಂದರು.

ಕಾಂಗ್ರೆಸ್‍ನ ಈಗಿನ ಸ್ಥಿತಿಗೆ ಬಹಳಷ್ಟು ಜನರು ಕಾರಣರಾಗಿದ್ದಾರೆ. ರಾಹುಲ್ ಗಾಂಧಿ ಒಬ್ಬರೇ ಅದಕ್ಕೆ ಕಾರಣ ಎನ್ನುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಶಾಸಕ ಸತೀಶ ಉತ್ತರಿಸಿದರು.

ಕಾಂಗ್ರೆಸ್ ಹಲವು ವರ್ಷಗಳಿಂದ ಇಂದಿರಾ ಗಾಂಧಿ ಕುಟುಂಬದ ಕೈಯಲ್ಲಿ ಇದೆ. ಗಾಂಧಿ ಕುಟುಂಬ ಕಾಂಗ್ರೆಸ್‍ಗೆ ಅನಿವಾರ್ಯವಾಗಿದೆ. ಹಾಗಾಗಿ ಕಾಂಗ್ರೆಸ್ ಗಾಂಧಿ ಕುಟುಂಬದ ಕೈಯಲ್ಲೇ ಇರಬೇಕು ಎಂದು ನಾನೂ ಹೇಳುತ್ತೇನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಸಮರ್ಥಿಸಿಕೊಂಡರು.

Shree Panjurlli Fine Dine ADD

- Advertisement -

Leave A Reply

Your email address will not be published.