The news is by your side.

ಸಿದ್ದನಗೌಡ ಪಾಟೀಲ ಇನ್ನಿಲ್ಲ

 

ಬೆಳಗಾವಿ : ಪ್ರಥಮ ಕನ್ನಡ ಭಾಷಿಕ
ಮಹಾಪೌರ ಸಿದ್ದನಗೌಡ ಪಾಟೀಲ ಶಿವಬಸವನಗರದ ತಮ್ಮ ನಿವಾಸದಲ್ಲಿ ಇಂದು ಬುಧವಾರ ಮಧ್ಯಾನ್ಹ 12 ಗಂಟೆಗೆ ನಿಧನರಾಗಿದ್ದಾರೆ. ಅವರಿಗೆ 87 ವರುಷ ವಯಸಾಗಿತ್ತು.

ಅವರು ಪತ್ನಿ, ದತ್ತು ಪುತ್ರ
ಹಾಗೂ ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಬುಧವಾರ ಮಧ್ಯಾನ್ಹ 3 ಗಂಟೆಗೆ ಅವರ ಸ್ವಗ್ರಾಮ ನೇಸರಗಿ ಬಳಿಯ ಮಲ್ಲಾಪೂರ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

1956 ರಿಂದಲೂ ಕನ್ನಡ ಹೋರಾಟದ ಮುಂಚೂಣಿಯಲ್ಲಿದ್ದ ಅವರು 1984 ರಲ್ಲಿ ಬೆಳಗಾವಿ ಪಾಲಿಕೆಯ ಸದಸ್ಯರಾಗಿ ಆಯ್ಕೆಯಾದರು.1990 ರಲ್ಲಿ ಮತ್ತೆ ಪುನರಾಯ್ಕೆಗೊಂಡರು.1991 ರಲ್ಲಿ ಪ್ರಥಮ ಕನ್ನಡ ಮಹಾಪೌರರಾಗಿ ಆಯ್ಕೆಗೊಂಡರು.
ಬೆಳಗಾವಿ ಡಿ.ಸಿ.ಸಿ. ಬ್ಯಾಂಕಿನ ನಿರ್ದೇಶಕರಾಗಿ ಮೂರು ಅವಧಿಯ ಸೇವೆ ಸಲ್ಲಿಸಿದ್ದ ಅವರು ಕರ್ನಾಟಕ ಗ್ರಾಹಕರ ಮಹಾಮಂಡಳಿಯ ನಿರ್ದೇಶಕರಾಗಿ 20 ವರ್ಷ ಸೇವೆ ಸಲ್ಲಿಸಿದ್ದರು. ಎರಡೂವರೆ ವರ್ಷಗಳ ಕಾಲ ಮಹಾಮಂಡಳದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ನಾಡು, ನುಡಿ, ಗಡಿ ಹೋರಾಟಗಳ ಮುಂಚೂಣಿಯಲ್ಲಿದ್ದ ಅವರು ಇತ್ತೀಚಿನವರೆಗೂ ಹೋರಾಟಗಳಲ್ಲಿ ಭಾಗವಹಿಸುತ್ತಲೇ ಬಂದಿದ್ದರು.
ಮರಾಠಿಗರ ಹಿಡಿತದಲ್ಲಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ರಾಜಕಾರಣಕ್ಕೆ ಹೊಸ ಭಾಷ್ಯ ಬರೆದ ಕೀರ್ತಿ ಪಾಟೀಲರದು.

- Advertisement -

Leave A Reply

Your email address will not be published.