The news is by your side.

ರಾಯಣ್ಣ ಪ್ರತಿಮೆ ವಿವಾದ ಶೀಘ್ರ ಇತ್ಯರ್ಥ: ಜಾರಕಿಹೊಳಿ

 

ರಾಮದುರ್ಗ:: ನಾಳೆ ಕರೆ ನೀಡಿರುವ ಪ್ರತಿಭಟನೆ ಹಿಂಪಡೆಯುವಂತೆ ಸಂಘಟನೆಗಳಿಗೆ ಮನವಿ ಮಾಡುವೆ, ಇಂದು ಸಂಜೆ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚಿಸುವೆ,ನಾಳೆ ಬೆಳಗ್ಗೆ ವಿವಿಧ ಸಂಘಟನೆಗಳ ಪದಾಧಿಕಾರಿಗಳ ಜೊತೆ ಚರ್ಚಿಸುವೆ, ಆದಷ್ಟು ಬೇಗ ಸಮಸ್ಯೆ ಬಗೆಹರಿಸುವುದಾಗಿ ರಮೇಶ್ ಜಾರಕಿಹೊಳಿ‌ ಭರವಸೆ ನೀಡಿದ್ದಾರೆ.
ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿರುವ ಕುರಿತು ಇಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ ಕಾನೂನು ಪ್ರಕಾರವಾಗಿ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಕುರಿತು ಚರ್ಚೆ ಮಾಡುವೆ. ಆಗಸ್ಟ್ 29ರಂದು ಪೀರನವಾಡಿಗೆ ಕೆ.ಎಸ್.ಈಶ್ವರಪ್ಪ ಭೇಟಿ ವಿಷಯವನ್ನು ಮಾದ್ಯಮ ಮಿತ್ರರು ಪ್ರಸ್ತಾಪಿಸಿದಾಗ,ಈಶ್ವರಪ್ಪ ಬಂದು ಭೇಟಿಯಾಗಲಿ, ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ನನ್ನ ಕೆಲಸ ಮಾಡುವೆ ಎಂದರು

- Advertisement -

Leave A Reply

Your email address will not be published.