The news is by your side.

ರಾಮದುರ್ಗ ಹೋರಾಟ: 15 ದಿನ ಟಾಯಿಮ್ ಪಡೆದ ಸರಕಾರ: ಹೋರಾಟ ಯಶಸ್ವಿ

 

ಬೆಳಗಾವಿ – ಕಳೆದ ವರ್ಷದ ನೆರೆ ಪರಿಹಾರ ವಿಳಂಬವೂ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ರಾಮದುರ್ಗ ತಾಲೂಕಿನಲ್ಲಿ ರೈತರು ನಡೆಸಿದ ಹೋರಾಟ ಸರಕಾರಕ್ಕೆ ಬಿಸಿ ಮುಟ್ಟಿಸುವಲ್ಲಿ ಯಶಸ್ಸು ಕಂಡಿದೆ.
ಇಂದು ಖುದ್ದು ಜಿಲ್ಲಾ ಉಸ್ತುವಾರಿ ಮಂತ್ರಿ ರಮೇಶ್ ಜಾರಕಿಹೊಳಿ ಹೋರಾಟದ ಸ್ಥಳಕ್ಕೆ ಭೇಟಿ ನೀಡಿ ಸಿ ಎಂ ಸೂಚನೆ ಮೇರೆಗೆ ಬಂದಿರುವುದಾಗಿ ಹೇಳಿ 15 ದಿನ ಟಾಯಿಮ್ ಪಡೆದು ತಕ್ಷಣ ಕ್ಕೆ ಹೋರಾಟದ ಕಿಚ್ಚು ಆರುವಂತೆ ಮತ್ತು ಹರಡದಂತೆ ತಡೆಗಟ್ಟುವಲ್ಲಿ ಯಶಸ್ಸು ಕಂಡಿದ್ದಾರೆ.
ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ನೆರೆ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು.
ಬೆಳಗಾವಿ ಜಿಲ್ಲೆಯ ರಾಮದುರ್ಗ ತಹಶಿಲ್ದಾರ ಕಚೇರಿ ಮುಂದೆ ನಡೆಯುತ್ತಿದ್ದ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಇಂದು ಭೇಟಿ ನೀಡಿದ ಸಚಿವ ರಮೇಶ್ ಜಾರಕಿಹೊಳಿ,ಸಿಎಂ ಸೂಚನೆ ಹಿನ್ನಲೆ ಪ್ರತಿಭಟನಾ ಸ್ಥಳಕ್ಕೆ ಬಂದು ಸಮಸ್ಯೆ ಆಲಿಸುತ್ತಿದ್ದೇನೆ. ಸಿಎಂ ಭೇಟಿಯಾಗಿ ಪರಿಹಾರಕ್ಕೆ ಮನವಿ ಮಾಡಿ ನೆರೆ ಪರಿಹಾರ ಕೊಡಿಸುತ್ತೇನೆ, ಹದಿನೈದು ದಿನಗಳಲ್ಲಿ ಎಲ್ಲವೂ ಸರಿ ಮಾಡುವುದಾಗಿ ಭರವಸೆ ಹಿನ್ನೆಲೆಯಲ್ಲಿ ನೆರೆ‌ ಸಂತ್ರಸ್ತರು ಮತ್ತು ರೈತರು ಪ್ರತಿಭಟನೆ ಹಿಂದಕ್ಕೆ ಪಡೆದಿದ್ದಾರೆ.
15 ದಿನಗಳಲ್ಲಿ ಸಮಸ್ಯೆ ಬಗೆಹರಿಸದಿದ್ರೆ ಸಚಿವ ರಮೇಶ್ ಜಾರಕಿಹೊಳಿ‌ ನಿವಾಸದೆದುರು ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ಕೊಟ್ಟಿದ್ದಾರೆ. ರಾಮದುರ್ಗ ತಾಲೂಕಿನ ಹಿರೇಹಂಪಿಹೋಳಿ, ಕಿಲಬನೂರ, ಅವರಾದಿ ಸೇರಿದಂತೆ ಹತ್ತಕ್ಕೂ ಅಧಿಕ ಗ್ರಾಮದ ನೆರೆ ಸಂತ್ರಸ್ತರು ಭಾಗಿಯಾಗಿದ್ದರು.
ನೆರೆ ಸಂತ್ರಸ್ತರನ್ನುದ್ದೇಶಿಸಿ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಭಾಷಣ ಮಾಡಿದರು.
ನಾನು ರಾಜಕಾರಣ ಭಾಷಣ ಮಾಡಲ್ಲ, ಸರ್ಕಾರದ ಪ್ರತಿನಿಧಿಯಾಗಿ ನಾನು ಬಂದಿದ್ದೇನೆ, ಜಾರಕಿಹೊಳಿ ಮನೆತನದವರು ವಿಶ್ವಾಸ ಇಟ್ಟುಕೊಂಡು ಕೆಲಸ ಮಾಡುತ್ತೇವೆ. ಕಳೆದ ಒಂದು ವರ್ಷದಿಂದ ಹೋರಾಟ ಮಾಡಿದ್ದೀರಿ ನಮಗೆ ದುಃಖ ಆಗಿದೆ, ಯಡಿಯೂರಪ್ಪ ಸಾಹೇಬರು ನಿಮ್ಮ ಕುರಿತು ಮಾತನಾಡಿದ್ದಾರೆ. ಕಾನೂನು ತೋಡಕುಗಳು ಇದ್ದಿದ್ದಕ್ಕೆ ಪರಿಹಾರ ಸಿಕ್ಕಿಲ್ಲ, ಜಿಲ್ಲೆಯಲ್ಲಿ ಒಂಬತ್ತು ಸಾವಿರಕ್ಕೂ ಹೆಚ್ಚು ಮನೆ ಬಿದ್ದವರಿಗೆ ಪರಿಹಾರದ ತೊಂದರೆಯಾಗಿದೆ,
ಸತತ ಏಳು ತಿಂಗಳಿಂದ ಕೊರೊನಾ ಇದ್ದಿದ್ದಕ್ಕೆ ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇವೆ, ನಮಗೆ ಸಮಯ ಕೊಡಿ ಯಾವುದಾದರೂ ಹಾದಿ ಹಿಡಿದು ಪರಿಹಾರ ತಂದು ಕೊಡುತ್ತೇನೆ ಎಂದು ರಮೇಶ್ ಜಾರಕಿಹೊಳಿ ಭರವಸೆ ನೀಡಿದರು.
ಧರಣಿ‌ ಮುಂದುವರಿಸಿದ್ದೇ ಆದ್ರೇ ನಮ್ಮ ಶಕ್ತಿ ಕಡಿಮೆಯಾಗುತ್ತೆ, ನೀವು ಧರಣಿ ಹಿಂಪಡೆದರೆ ಹೆಚ್ಚಿನ ಶಕ್ತಿ ಬರುತ್ತೆ, ಸೋಮವಾರ ಬೆಳಗ್ಗೆ ಸಿಎಂ ಭೇಟಿಯಾಗಿ ಮೊದಲು ನಿಮ್ಮ ವಿಷಯ ಚರ್ಚೆ ಮಾಡುತ್ತೇನೆ. ಸಿಎಂ ಯಡಿಯೂರಪ್ಪ ನನ್ನ ಮಾತು ಮೀರಲ್ಲ. ನನ್ನ ಮೇಲೆ ವಿಶ್ವಾಸವಿಡಿ‌, ಎಂದು ಧರಣಿ ನಿರತ ನೆರೆಸಂತ್ರಸ್ತರ ಬಳಿ ಸಚಿವ ರಮೇಶ್ ಜಾರಕಿಹೊಳಿ‌ ಮನವಿ ಮಾಡಿಕೊಂಡ ಬಳಿಕ, ರೈತರು ಮತ್ತು ಸಂತ್ರಸ್ತರು ಪ್ರತಿಭಟನೆ ವಾಪಸ್ ಪಡೆದರು.

Shree Panjurlli Fine Dine ADD

- Advertisement -

Leave A Reply

Your email address will not be published.