The news is by your side.

ಮಳೆಯಿಂದ ಹಾನಿಯಾದ ಮನೆಗಳ ಮರು ನಿರ್ಮಾಣ

 

ಬೆಳಗಾವಿ: ಇಂದಿಲ್ಲಿ ಜರುಗಿದ ಕ್ಯಾಂಟೋನ್ಮೆಂಟ್ ಬೋರ್ಡ್ ಸಭೆಯಲ್ಲಿ ಬೋರ್ಡ್ ಸದಸ್ಯ ಸಾಜೀದ್ ಶೇಖ್ ಮಾತನಾಡಿ, ಮಳೆಯಿಂದ ಬಿದ್ದಿರುವ ಕ್ಯಾಂಟೋನ್ಮೆಂಟ್ ವ್ಯಾಪ್ತಿಯ ಮನೆಗಳನ್ನು ಮರು ನಿರ್ಮಿಸಲು ಅವಕಾಶ ನೀಡಬೇಕು ಎಂದು ಕೋರಿದರು. ಸಂತ್ರಸ್ತರು ಅರ್ಜಿ ಸಲ್ಲಿಸಲು ಅವಕಾಶವಿದೆ, ಈ ಕುರಿತು ಪರಿಶೀಲಿಸಿ ಕಟ್ಟಡ ನಿರ್ಮಿಸಲು ಅವಕಾಶ ನೀಡಲಾಗುವುದು ಎಂದು ಬ್ರಿಗೇಡಿಯರ್ ರೋಹಿತ್ ಚೌಧರಿ ತಿಳಿಸಿದರು.
ಕ್ಯಾಂಟೋನ್ಮೆಂಟ್ ಪ್ರದೇಶದ ಹಲವೆಡೆ ಬೀದಿ ದೀಪಗಳು ಉರಿಯುತ್ತಿಲ್ಲ. ಹೊಸದಾಗಿ ಬೀದಿ ದೀಪಗಳನ್ನು ಅಳವಡಿಸಲು ಅನುಮತಿ ನೀಡಬೇಕು, ಆಗಸ್ಟ್‍ನಲ್ಲಿ ಕ್ಯಾಂಟೋನ್ಮೆಂಟ್ ಬೋರ್ಡ್‍ನ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಮುಗಿಯುತ್ತದೆ. ಹೊಸದಾಗಿ ಚುನಾವಣೆ ನಡೆಸಲು ಅವಕಾಶ ಇಲ್ಲವಾದ್ದರಿಂದ ಸದಸ್ಯರ ಅವಧಿಯನ್ನು 6 ತಿಂಗಳು ವಿಸ್ತರಿಸಬೇಕು ಎಂದು ಬೋರ್ಡ್‍ನಲ್ಲಿ ಒಮ್ಮತದಿಂದ ನಿರ್ಣಯ ಕೈಗೊಳ್ಳಲಾಯಿತು. ಲೋಕೋಪಯೋಗಿ ವಿಭಾಗದ ವಿದ್ಯುತ್ ಸಂಬಂಧಿತ ಕೆಲಸಗಳಿಗೆ ಅನುಕೂಲವಾಗಲು ಹೊಸ ವಾಹನ ಖರೀದಿಸಲು ಬೋರ್ಡ್ ಅನುಮತಿ ನೀಡಿತು.
ಬೋರ್ಡ್‍ನ ಹಿರಿಯ ಸದಸ್ಯ ನಿರಂಜನ ಅಷ್ಟೇಕರ್, ಸಿಇಒ ಬರ್ಚಸ್ವಾ, ವಿಕ್ರಮ್ ಪುರೋಹಿತ್, ರಿವಾನ್ ಬೇಪಾರಿ, ಅರ್ಬಿಯಾ ಧಾರವಾಡಕರ್, ಅಲ್ಲಾವುದ್ದೀನ್ ಕಿಲ್ಲೇದಾರ್, ಕರ್ನಲ್ ಡಾ.ಪದ್ಮಿನಿ, ಕರ್ನಲ್ ಚೇತನ್, ಲೆಫ್ಟ್‍ನೆಂಟ್ ಕರ್ನಲ್ ಸಿಬೇ ಥಾಮಸ್ ಮತ್ತಿತರರು ಇದ್ದರು.

Shree Panjurlli Fine Dine ADD

- Advertisement -

Leave A Reply

Your email address will not be published.