The news is by your side.

ಕಮಲ ತೊರೆದು “ಕೈ” ಸೇರಿದ ಮುಖಂಡರು

 

ಬೆಳಗಾವಿ: ಬೆನ್ನಾಳಿ ಗ್ರಾಮದ ವಿಶ್ವಕರ್ಮ ಸಮುದಾಯದ ಹಲವಾರು ಬಿಜೆಪಿ ಮುಖಂಡರು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ ಸಮ್ಮುಖದಲ್ಲಿ ಗುರುವಾರ ಕಾಂಗ್ರೆಸ್ ಸೇರ್ಪಡೆಯಾದರು.

ಮೌನೇಶ್ವರ ನಗರದಲ್ಲಿ ಶಾಸಕ ಸತೀಶ ಜಾರಕಿಹೊಳಿ ಬಿಜೆಪಿ‌‌ ಮುಖಂಡರನ್ನು ಪಕ್ಷಕ್ಕೆ ಬರ ಮಾಡಿಕೊಂಡು, ಹೂವಿನ ಹಾರ ಹಾಕಿ ಸನ್ಮಾನಿಸಿದರು.

ಬಳಿಕ ಮಾತನಾಡಿದ ಶಾಸಕ ಸತೀಶ, 10 ವರ್ಷಗಳಿಂದ ಯಮಕನಮರಡಿ ಕ್ಷೇತ್ರದಲ್ಲಿ ಶಿಕ್ಷಣ ಸೇರಿ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ. ಪ್ರತಿಯೊಂದು ಗ್ರಾಮ ಶಾಲಾ ಕೊಠಡಿ, ರಸ್ತೆ ನವೀಕರಣಗೊಳಿಸಿ ಮಾದರಿ ಕ್ಷೇತ್ರದತ್ತ ಹೆಜ್ಜೆ ಹಾಕಿದ್ದೇವೆ. ನಮ್ಮ ಅಭಿವೃದ್ದಿ ಕಂಡು ಬಿಜೆಪಿ ಮುಖಂಡರು ಕಾಂಗ್ರೆಸ್ ನತ್ತ ಹೆಜ್ಜೆ ಹಾಕುತ್ತಿದ್ದು, ಸಂತಸದ ವಿಷಯ ಎಂದರು.
ಕೆ.ಎಚ್.‌ಬಡಿಗೇರ್, ಬಿ.ಎಸ್ ಕಂಠಿ, ಚಂದ್ರಕಾಂತ ಸುಲದಾಳ್, ವಂಸತ ಲೋಹಾರ್, ರವಿ ಲೋಹಾರ್, ಕೆ. ವೈ ಪತ್ತಾರ್, ವಿಜಯ ಸುತಾರ್, ಬಸವರಾಜ್ ಸುತಾರ್, ಅಶೋಕ ಬಡಿಗೇರ್ ಸೇರಿದಂತೆ 10 ಕ್ಕೂ ಹೆಚ್ಚು ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರ್ಪಡೆಯಾದರು.

ದೇಶದಲ್ಲಿ ಕಾಂಗ್ರೆಸ್ ಮುಕ್ತಗೊಳಿಸಲು ಬಿಜೆಪಿ ತಂತ್ರ ನಡೆಸುತ್ತಿರುವ ಮಧ್ಯೆಯೇ ಬಿಜೆಪಿ ಮುಖಂಡರೇ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಅಚ್ಚರಿಯದ ಸಂಗತಿಯಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಹಲವು ಬದಲಾವಣೆಯಾಗಿದ್ದು, ರಾಜ್ಯ, ದೇಶದಲ್ಲಿ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳುತ್ತಿದೆ.

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸದಸ್ಯ ಸಿದ್ದು ಸುಣಗಾರ, ಪಾಂಡು ಮನ್ನಿಕೇರಿ, ಮಲಗೌಡಾ ಪಾಟೀಲ್, ಆನಂದ ಪಟೇದ್, ವಿಶ್ವಕರ್ಮ ಸಮಾಜದ ಜಿಲ್ಲಾ ಮಟ್ಟದ ಪದಾಧಿಕಾರಿಗಳು, ಹೊನಗಾ, ಕಾಕತಿ, ಬೆನ್ನಾಳಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

- Advertisement -

Leave A Reply

Your email address will not be published.