The news is by your side.

ಪುಲ್ವಾಮಾ ದಾಳಿಯ ಉಗ್ರನ ಪ್ರೇಯಸಿ ಎನ್ ಐಎ ಬಲೆಗೆ

 

ಹೊಸದಿಲ್ಲಿ: ಕಾಶ್ಮೀರದ ಪುಲ್ವಾಮಾದಲ್ಲಿ ನಡೆದಿದ್ದ ದಾಳಿಗೆ ಸಂಬಂಧಿಸಿದಂತೆ ಅನೇಕ ವಿಚಾರಗಳು ಬಯಲಾಗಿದ್ದು, 40 ಜನ ಯೋಧರ ಸಾವಿಗೆ ಕಾರಣವಾಗಿದ್ದ ಪುಲ್ವಾಮಾ ದಾಳಿ ರೂಪಿಸಲು ಉಗ್ರರಿಗೆ ನೆರವಾಗಿದ್ದು ಕಾಶ್ಮೀರದ ಯುವತಿ ಎಂಬ ಮಾಹಿತಿ ವರದಿಯಾಗಿದೆ. 2019 ರ ಫೆಬ್ರವರಿ 14ರಂದು ಈ ದಾಳಿ ನಡೆದಿತ್ತು.

ಕಾಶ್ಮೀರದಲ್ಲಿ ಉಗ್ರರಿಗೆ ಉಳಿದುಕೊಳ್ಳಲು ಮನೆ, ಊಟ ಮತ್ತು ವಾಹನಗಳನ್ನು ನೀಡಿ ಸಹಾಯ ಮಾಡಿದ್ದ ಉಗ್ರನ ಪ್ರೇಯಸಿ 23 ವರ್ಷದ ಇನ್ಶಾ ಜಾನ್ ಎಂಬಾಕೆಯನ್ನು ಬಂದಿಸಲಾಗಿದೆ.

ದಾಳಿಯ ಹಿಂದಿನ ಪ್ರಮುಖ ರೂವಾರಿಗಳಾ ಉಮರ್ ಫಾರೂಖ್, ಸಮೀರ್ ದಾರ್ ಮತ್ತು ಆದಿಲ್ ಅಹಮದ್ ದಾರ್ ಗೆ ಇನ್ಶಾ ಜಾನ್ ಮತ್ತು ಆಕೆ ತಂದೆ ತಾರಿಖ್ ಪಿರ್ ಸಹಾಯ ಮಾಡಿದ್ದರು ಎನ್ನಲಾಗಿದೆ. ಉಮರ್ ಫಾರೂಖ್ ಮತ್ತುಇನ್ಶಾ ಜಾನ್ ಪರಸ್ಪರ ಪ್ರೀತಿಸುತ್ತಿದ್ದು, ಜಾನ್ ತಂದೆ ತಾರಿಖ್ ಗೆ ತಿಳಿದಿತ್ತು ಎನ್ನಲಾಗಿದೆ.

ಇವರಿಬ್ಬರ ನಡುವೆ ಸಾಮಾಜಿ ಜಾಲತಾಣಗಳಲ್ಲಿ ಬಹಳಷ್ಟು ಸಂದೇಶಗಳು ರವಾನೆಯಾಗಿತ್ತು. 2018 ರ ಎಪ್ರಿಲ್ ನಲ್ಲೇ ಉಮರ್ ಫಾರೂಖ್ ಕಾಶ್ಮೀರಕ್ಕೆ ಬಂದಿದ್ದ ಎನ್ನಲಾಗಿದೆ. ಈ ಭಾಗದಲ್ಲಿ ಯಾವ ವಾಹನಗಳು ಸಂಚರಿಸುತ್ತದೆ, ಭದ್ರತಾ ಪಡೆಗಳು ಯಾವ ಸಮಯದಲ್ಲಿ ಒಡಾಡುತ್ತಾರೆ ಎನ್ನುವ ಮಾಹಿತಿಗಳನ್ನು ಜಾನ್ ತನ್ನ ಪ್ರಿಯಕರ ಉಮರ್ ಗೆ ನೀಡಿದ್ದಳು ಎನ್ನಲಾಗಿದೆ.

- Advertisement -

Leave A Reply

Your email address will not be published.