The news is by your side.

ಸೆ.10ರಂದು ಸೇನೆಗೆ ರಫೇಲ್ ಅಧಿಕೃತ ಸೇರ್ಪಡೆ ..!

10ರಂದು ಅಧಿಕೃತವಾಗಿ ಸೇರ್ಪಡೆಗೊಳಿಸಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.ಹರ್ಯಾಣದ ಅಂಬಾಲಾ ವಾಯುನೆಲೆಯಲ್ಲಿ ಅಂದು ನಡೆಯಲಿರುವ ಸರಳ ಸಮಾರಂಭದಲ್ಲಿ ರಫೆಲ್ ವಿಮಾನವನ್ನು ಅಧಿಕೃತವಾಗಿ ಸೇರ್ಪಡೆ ಮಾಡಲಾಗುವುದು ಈ ಸಮಾರಂಭದಲ್ಲಿ ಭಾಗವಹಿಸಲು ಫ್ರಾನ್ಸ್ ನ ರಕ್ಷಣಾ ಸಚಿವರಾದ ಫ್ಲೊರೆನ್ಸ್ ಪರ್ಲಿ ಅವರಿಗೆ ಕೂಡ ಆಹ್ವಾನ ನೀಡಲಾಗಿದೆ.

ಈ ಬಗ್ಗೆ ಎಎನ್ ಐ ಸುದ್ದಿಸಂಸ್ಥೆಗೆ ಮಾಹಿತಿ ನೀಡಿರುವ ರಕ್ಷಣಾ ಮೂಲಗಳು, ರಕ್ಷಣಾ ಸಚಿವರು ರಷ್ಯಾದಲ್ಲಿ ಶಾಂಘೈ ಸಹಕಾರ ಸಂಘದ ರಕ್ಷಣಾ ಸಚಿವರುಗಳ ಸಭೆಯಲ್ಲಿ ಸೆಪ್ಟೆಂಬರ್ 4ರಿಂದ 6ರವರೆಗೆ ಭಾಗವಹಿಸಲಿದ್ದಾರೆ.ಅಲ್ಲಿಂದ ಹಿಂತಿರುಗಿದ ನಂತರ ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಗೆ ಸೇರ್ಪಡೆಗೊಳಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿವೆ.

ಕಳೆದ ಜುಲೈ 29ರಂದು ಐದು ರಫೇಲ್ ಯುದ್ಧ ವಿಮಾನವನ್ನು ಭಾರತಕ್ಕೆ ತರಲಾಗಿತ್ತು. ಇಲ್ಲಿಗೆ ಬಂದ 24 ಗಂಟೆಗಳಲ್ಲಿಯೇ ಪೈಲಟ್ ಗಳಿಗೆ ತರಬೇತಿ ಆರಂಭವಾಗಿತ್ತು. ವಾಯುಪಡೆಯ 17 ಗೋಲ್ಡನ್ ಏರ್ರೋಸ್ ಸ್ಕ್ವಾಡ್ರನ್ ನ ಭಾಗವಾಗಿರುತ್ತದೆ ರಫೇಲ್. ಇದರಲ್ಲಿ ಮೂರು ಸಿಂಗಲ್ ಸೀಟರ್ ಮತ್ತು ಎರಡು ಅವಳಿ ಸೀಟರ್ ಗಳಿರುತ್ತದೆ.

ಈಗಾಗಲೇ ಚೀನಾ ಗಡಿಯ ಲಡಾಕ್ ಕಣಿವೆ ಭಾಗದಲ್ಲಿ ಹಾರಾಟ ನಡೆಸಿರುವ ರಫೇಲ್ ಮುಂದಿನ ದಿನಗಳಲ್ಲಿ ದೇಶದ ವಿವಿಧ ಭಾಗಗಳಲ್ಲಿ ಹಾರಾಟ ನಡೆಸಲಿದೆ.

Shree Panjurlli Fine Dine ADD

- Advertisement -

Leave A Reply

Your email address will not be published.