The news is by your side.

ವಾಲ್ಮೀಕಿ ನಿಗಮದ ಮೇಲೆ ಎಸಿಬಿ ದಾಳಿ: ೮೨ ಲಕ್ಷ ರೂ. ಜಪ್ತಿ

ಬೆಂಗಳೂರು,ಆ.೨೮-ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧಿಕಾರಿಗಳು ಲಂಚದ ಹಣ ಹಂಚಿಕೊಳ್ಳುವಾಗಲೇ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ೮೨ ಲಕ್ಷ ರೂಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮಂಡಳಿಯ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಧಾಪಕಿ ಮಂಜುಳಾ ಹಾಗೂ ಮ್ಯಾನೇಜರ್ ಸುಬ್ಬಯ್ಯ ಅವರ ಬಳಿಯಿಂದ ೮೨ ಲಕ್ಷ ರೂಗಳನ್ನು ವಶಕ್ಕೆ ಪಡೆದು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ.

ಭೂಮಿ ಖರೀದಿಸಿ ಕೊಡುವ ಯೋಜನೆಯಲ್ಲಿ ಮಧ್ಯವರ್ತಿಗಳ ಮೂಲಕ ಅಕ್ರಮ ನಡೆಸಿ ಹಣ ಹಂಚಿಕೊಳ್ಳುತ್ತಿದ್ದ ವೇಳೆಯಲ್ಲಿ ವಸಂತ ನಗರದ ಕಚೇರಿ ಮೇಲೆ ನಿನ್ನೆ ಸಂಜೆ ದಾಳಿ ನಡೆಸಲಾಗಿದೆ.

ಸರ್ಕಾರದ ವತಿಯಿಂದ ಜಮೀನು ಖರೀದಿಸಿ ಪರಿಶಿಷ್ಟ ಪಂಗಡದ ಭೂರಹಿತ ಫಲಾನುಭವಿಗಳಿಗೆ ನೀಡುವ ಯೋಜನೆಯಡಿ ಅಕ್ರಮ ಎಸಗಲಾಗಿದೆ. ಫಲವತ್ತಾದ ಜಮೀನು ಬದಲಿಗೆ ಕಳಪೆ ಜಮೀನನ್ನು ಮಧ್ಯವರ್ತಿಗಳ ಮೂಲಕ ಖರೀದಿಸಿ ನಿಗದಿಗಿಂತ ಹೆಚ್ಚಿನ ಮೊತ್ತವನ್ನು ಕೊಡಲಾಗುತ್ತದೆ ಎಂಬ ದೂರು ಗಳ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ.

ಅಕ್ರಮ ನಡೆಸಿ ಹಣ ಹಂಚಿಕೊಳ್ಳುವಾಗ ಎಸಿಬಿ ಎಸ್ಪಿ ಕಲಾ ಕೃಷ್ಣಸ್ವಾಮಿ ಅವರ ನೇತೃತ್ವದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ದಾಳಿ ತಡರಾತ್ರಿಯವರೆಗೆ ಮುಂದುವರೆದಿದ್ದು ಕಚೇರಿ ಹಾಗೂ ಮಂಡಳಿಯ ಪ್ರಧಾನ ವ್ಯವಸ್ಥಾಪಕ ನಾಗೇಶ್, ಸಹಾಯಕ ಪ್ರಧಾನ ವ್ಯವಸ್ಧಾಪಕಿ ಮಂಜುಳಾ ಹಾಗೂ ಮ್ಯಾನೇಜರ್ ಸುಬ್ಬಯ್ಯರ ಮನೆಯ ಮೇಲೆ ದಾಳಿ ನಡೆಸಲಾಗಿದೆ.

ಮಂಜುಳಾ ಅವರ ಮನೆಯನ್ನು ಹೊರತು ಪಡಿಸಿ ಉಳಿದಿಬ್ಬರ ಮನೆಯಲ್ಲಿ ಹಣ ದೊರೆತಿದ್ದು ಅದು ೮೨ ಲಕ್ಷ ರೂಗಳಾಗಿದೆ ಎಂದು ಎಸ್ಪಿ ಕಲಾ ಕೃಷ್ಣಸ್ವಾಮಿ ತಿಳಿಸಿದ್ದಾರೆ.

- Advertisement -

Leave A Reply

Your email address will not be published.