The news is by your side.

ಊಟ ಕೇಳಿದ್ದಕ್ಕೆ ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಅಜ್ಜಿ-ತಾಯಿ.

ಬೆಂಗಳೂರು : ಎರಡು ವರ್ಷದ ಪುಟ್ಟ ಮಗುವಿನ ಮೇಲೆ ಅಜ್ಜಿ ಮತ್ತು ಮಗುವಿನ ತಾಯಿ ಮಾರಣಾಂತಿಕ ಹಲ್ಲೆ ನಡೆಸಿರುವ ಅಮಾನವೀಯ ಘಟನೆ ನಗರದ ಗುರಪ್ಪನಪಾಳ್ಯದ ಸಲೀಂಸ್ಟೊರ್ ಗಲ್ಲಿ ಬಳಿ ನಡೆದಿದೆ. ಮಗು ಹೆಚ್ಚು ಊಟ ಕೇಳ್ತಾನೆ ಎಂದು ಕ್ಷಲ್ಲಕ ಕಾರಣ ನೀಡಿ ಕಳೆದ 15 ದಿನಗಳಿಂದ ರಕ್ತಗಾಯವಾಗುವಂತೆ ಗಂಭೀರ ಹಲ್ಲೆ ಮಾಡಿದ್ದಲ್ಲದೆ, ಬೆಂಕಿಯಿ0ದ ಬಾಲಕನ ಮೈಗೆ ಸುಟ್ಟು ಅಜ್ಜಿ ಅರ್ಮಾನ್ ವಿಕೃತಿ ಮೆರೆದಿದ್ದಾಳೆ.

ಗುರಪ್ಪನಪಾಳ್ಯದಲ್ಲಿ ವಾಸವಿರುವ ಇಮ್ರಾನ್ ಪಾಷಾ ಮತ್ತು ಅಜೀರಾ ದಂಪತಿಯ 2 ವರ್ಷದ ಬಾಲಕನಿಗೆ ಅಜ್ಜಿ ಮುಬೀನಾ(45) ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಈಕೆಯ ಕ್ರೌರ್ಯಕ್ಕೆ ಎಲ್ಲೆಡೆ ಬಾರೀ ಟೀಕೆ ವ್ಯಕ್ತವಾಗುತ್ತಿದೆ.

ಮಗುವಿನ ಮೈ ಸುಟ್ಟು ಹಲ್ಲೆ ನಡೆಸುತ್ತಿದ್ದರೂ ಆ ಮಗುವಿನ ತಾಯಿ ಅಜೀರಾ ಮಾತ್ರ ಕಿಂಚಿತ್ತೂ ಕರುಣೆ ಇಲ್ಲದೆ ಹಲ್ಲೆ ಮಾಡುವುದನ್ನ ನೋಡುತ್ತಾ ನಿಂತಿರೋದು ಎಂಥವರಿಗೂ ಅಸಹ್ಯ ಹುಟ್ಟಿಸುತ್ತೆ. ಇನ್ನು ಮಗುವಿನ ತಂದೆ ಇಮ್ರಾನ್ ಪಾಷಾ, ಮಗುವಿನ ಗಾಯಗಳ ಬಗ್ಗೆ ಕೇಳಿದರೆ ಸುಳ್ಳು ಸಬೂಬುಗಳನ್ನ ಹೇಳುತ್ತಿದ್ದ ಹೆಂಡತಿ ಮತ್ತು ಅತ್ತೆ ಆ ಪುಟ್ಟ ಮಗುವಿಗೆ ಚಿತ್ರಹಿಂಸೆ ನೀಡಿದ್ದಾರೆ.

ಸದ್ಯ ಗಾಯಾಳು ಮಗುವನ್ನ ಇಂದಿರಾಗಾoಧಿ ಆಸ್ಪತ್ರೆಗೆ ದಾಲಿಸಿ ಚಿಕತ್ಸೆ ಕೊಡಿಸಲಾಗುತ್ತಿದೆ. ರಾಕ್ಷಸಿ ಅಜ್ಜಿ ಮತ್ತು ತಾಯಿಗೆ ತಕ್ಕ ಶಿಕ್ಷೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದು, ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

- Advertisement -

Leave A Reply

Your email address will not be published.